ಭೋಪಾಲ್: ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನದಲ್ಲಿ (Kuno National Park) ಇಂದು ಮತ್ತೊಂದು ಚಿರತೆ ಸಾವನ್ನಪ್ಪಿದೆ. ಆ ಮೂಲಕ ಇಲ್ಲಿ ಚಿರತೆಗಳ ಸಾವಿನ ಸಂಖ್ಯೆ 10 ಕ್ಕೇರಿದೆ. 2022 ರಲ್ಲಿ ನಮೀಬಿಯಾ ಚಿರತೆಗಳನ್ನು (Namibian Cheetah) ಭಾರತದಲ್ಲಿ ಮತ್ತೆ ಪರಿಚಯಿಸಲಾಗಿತ್ತು. ಇಂದು ಮೃತಪಟ್ಟ ನಮೀಬಿಯಾದ ಚಿರತೆ ‘ಶೌರ್ಯ’ ಎಂದು ಗುರುತಿಸಲಾಗಿದೆ. ಮರಣೋತ್ತರ ಪರೀಕ್ಷೆಯ ನಂತರ ಸಾವಿನ ಕಾರಣ ತಿಳಿಯಲಿದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.
ಸಂಕ್ರಾಂತಿ ಹಬ್ಬದಂದು ಹಸುವಿನ ಜೊತೆ ತಮ್ಮದೇ ಸ್ಟೈಲ್ನಲ್ಲಿ ಶುಭಾಶಯ ತಿಳಿಸಿದ ದರ್ಶನ್!
ಇಲ್ಲಿಯವರೆಗೆ ರಾಷ್ಟ್ರೀಯ ಉದ್ಯಾನದಲ್ಲಿ ಏಳು ವಯಸ್ಕ ಮತ್ತು ಮೂರು ಚಿರತೆ ಮರಿಗಳು ಸಾವನ್ನಪ್ಪಿವೆ. ಮಧ್ಯಾಹ್ನ 3:17 ರ ಸುಮಾರಿಗೆ ನಮೀಬಿಯಾದ ಶೌರ್ಯ ಹೆಸರಿನ ಚಿರತೆ ಕೊನೆಯುಸಿರೆಳೆದಿದೆ. 1952 ರಲ್ಲಿ ಭಾರತದಲ್ಲಿ ಚೀತಾಗಳು ಅಳಿವಿನಂಚಿನಲ್ಲಿವೆ ಎಂದು ಘೋಷಿಸಲಾಯಿತು. 2022 ರಲ್ಲಿ ಮತ್ತೆ ಈ ತಳಿಯ ಪ್ರಾಣಿಗಳನ್ನು ಉದ್ಯಾನವನಕ್ಕೆ ತರಲಾಯಿತು. ಚೀತಾಗಳನ್ನು ಎರಡು ಬ್ಯಾಚ್ಗಳಲ್ಲಿ ಆಮದು ಮಾಡಿಕೊಳ್ಳಲಾಯಿತು. 2022 ರಲ್ಲಿ ನಮೀಬಿಯಾ ಮತ್ತು 2023 ರಲ್ಲಿ ದಕ್ಷಿಣ ಆಫ್ರಿಕಾದಿಂದ ಅವುಗಳನ್ನು ತರಲಾಗಿತ್ತು.