ಬೆಂಗಳೂರು:- ನಮ್ಮ ಮೆಟ್ರೋ ಪ್ರಯಾಣಿಕರಿಗೆ BMRCL ಬಿಗ್ ಅಪ್ಡೇಟ್ ಕೊಟ್ಟಿದೆ. MG ರೋಡ್ನಿಂದ ಶಿವಾಜಿನಗರ ಮೆಟ್ರೋ ಸ್ಟೇಷನ್ವರೆಗಿನ ಸುರಂಗ ಮಾರ್ಗದಲ್ಲಿ ನಿನ್ನೆ ಪರಿಶೀಲನೆ ನಡೆದಿದೆ. ಬೆಂಗಳೂರಿನ ಪಿಂಕ್ ಲೈನ್ ಮೆಟ್ರೋ ಸುರಂಗ ಮಾರ್ಗ ಶೀಘ್ರದಲ್ಲೇ ಆರಂಭವಾಗುವ ಬಗ್ಗೆ ಮಹತ್ವದ ಮಾಹಿತಿ ನೀಡಿದೆ.
45 ನೌಕರರನ್ನು ವಜಾ ಮಾಡಿದ ನಿರಾಣಿ ಶುಗರ್ಸ್ ಕಂಪನಿ: ಚಿಮಿಣಿ ಏರಿ ಕುಳಿತ ಕಾರ್ಮಿಕ!
ಹೀಗಾಗಿ ಬೆಂಗಳೂರು ಜನರಿಗೆ ಮತ್ತೊಂದು ಗುಡ್ನ್ಯೂಸ್ ಸಿಕ್ಕಂತಾಗಿದೆ. ಬಹು ನಿರೀಕ್ಷೆಯ ನಮ್ಮ ಮೆಟ್ರೋದ ಪಿಂಕ್ ಲೈನ್ ಓಪನ್ ಆಗಲಿದೆ.
ಎಂಜಿ ರೋಡ್ನಿಂದ ಶಿವಾಜಿನಗರ ಮೆಟ್ರೋ ಸ್ಟೇಷನ್ವರೆಗೆ ಸುರಂಗ ಮಾರ್ಗದಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ. ಇಂದು ಟಿಬಿಎಂ ಮಷಿನ್ ಸುರಂಗ ಕೊರೆದು ಹೊರ ಬಂದಿದೆ. ಅಂಡರ್ ಗ್ರೌಂಡ್ ಮೆಟ್ರೋ ಕಾಮಗಾರಿಗಾಗಿ 9 ಟಿಬಿಎಂ ಮೆಷಿನ್ಗಳನ್ನು ಭೂಮಿಗಿಳಿಸಲಾಗಿತ್ತು.
ಅದರಲ್ಲಿ ಈಗಾಗಲೇ 8 ಟಿಬಿಎಂ ಮೆಷಿನ್ ಸುರಂಗ ಕೊರೆದು ಹೊರಗೆ ಬಂದಿವೆ. ಉಳಿದಿರುವ ಒಂದು ಟಿಬಿಎಂ ಮೆಷಿನ್ ಹೊರ ಬಂದಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಪರಿಶೀಲನೆಯಲ್ಲಿ ತೊಡಗಿದ್ದಾರೆ.
ಬೆಂಗಳೂರಿನ ಅತಿ ಉದ್ದದ ಭೂಗತ ಮೆಟ್ರೋ ಮಾರ್ಗವನ್ನು ಹೊಂದಿರುವ ಪಿಂಕ್ ಲೈನ್ ಯೋಜನೆ ಇದೆ. ಪಿಂಕ್ ಲೈನ್ 2 ಹಂತಗಳನ್ನು ಹೊಂದಿದೆ. 21.26 ಕಿಲೋ ಮೀಟರ್ ಉದ್ದದ ಈ ಮಾರ್ಗ ಕಾಳೇನ ಅಗ್ರಹಾರ, ನಾಗವಾರ ನಡುವೆ ಬರೋಬ್ಬರಿ 12 ಭೂಗತ ನಿಲ್ದಾಣಗಳು ಹಾಗೂ 6 ಎತ್ತರಿಸಿದ ನಿಲ್ದಾಣಗಳಿವೆ.