ಬೆಂಗಳೂರು:- ಬಟ್ಟೆ ಹಾಗೂ ಶೂ ಮಳಿಗೆಗೆ ಬೆಂಕಿ ತಗುಲಿ ಹೊತ್ತಿ ಉರಿದ ಘಟನೆ ಬೆಂಗಳೂರು ನಗರದ ಚಿಕ್ಕಜಾಲದಲ್ಲಿ ಸೋಮವಾರ ತಡರಾತ್ರಿ ನಡೆದಿದೆ.
ರಾತ್ರಿ ಸುಮಾರು 10ಗಂಟೆ ಸುಮಾರಿಗೆ ನಡೆದಿರೋ ಘಟನೆ ಶಾರ್ಟ್ ಸೆರ್ಕ್ಯೂಟ್ನಿಂದ ಬೆಂಕಿಹೊತ್ತಿಕೊಂಡಿರುವ ಶಂಕೆ. ಬೆಂಕಿ ಕಾಣಿಸಿಕೊಳ್ಳತಿದ್ದಂತೆ ಅಗ್ನಿಶಾಮಕ ದಳಕ್ಕೆ ಕರೆ ಮಾಡಲಾಗಿದೆ. ಅಗ್ನಿ ಶಾಮಕದಳ ಸಿಬ್ಬಂದಿ ಮಳಿಗೆಗೆ ಹೊತ್ತಿಕೊಂಡಿದ್ದ ಬೆಂಕಿ ನಂದಿಸಿದ್ದಾರೆ. ಕೆಲವು ಸುಟ್ಟು ಕರಕಲಾಗಿವೆ. ಚಿಕ್ಕಜಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.