ಬೆಳಗಾವಿ: ಬೆಳಗಾವಿಯಲ್ಲಿ ಮತ್ತೊಂದು ಫೈನಾನ್ಸ್ ಕಿರುಕುಳ ಪ್ರಕರಣ ಬೆಳಕಿಗೆ ಬಂದಿದೆ. ಫೈನಾನ್ಸ್ ಸಿಬ್ಬಂದಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆ ಸೀಜ್ ಮಾಡಿರುವ ಘಟನೆ ಕಿತ್ತೂರು ತಾಲೂಕಿನ ಬೈಲೂರು ಗ್ರಾಮದಲ್ಲಿ ನಡೆದಿದೆ. ಜಮೀನಿಗೆ ಹೋದಾಗಲೇ ಫೈನಾನ್ಸ್ ಸಿಬ್ಬಂದಿ ಮನೆ ಸೀಜ್ ಮಾಡಿದ್ದು, ಇದೀಗ ಯಲ್ಲವ್ವ ಬಸಪ್ಪ ಕುರಕುಂದ ಎಂಬುವವರ ಕುಟುಂಬ ಬೀದಿಗೆ ಬಿದ್ದಿದೆ.
ಬೆಳಗಾವಿಯಲ್ಲಿ ಮತ್ತೊಂದು ಅಮಾನವೀಯ ಘಟನೆ: ಬಾಣಂತಿ ಮನೆ ಸೀಜ್ ಮಾಡಿದ ಫೈನಾನ್ಸ್ ದುರುಳರು!
ಐದು ವರ್ಷದ ಹಿಂದೆ ಬಸಪ್ಪ ಕುರಗುಂದ ಎಂಟು ಲಕ್ಷ ಸಾಲ ಪಡೆದಿದ್ದನು. ಈವರೆಗೂ 9 ಲಕ್ಷ ಹಣ ಕಟ್ಟಿದ್ದ ಬಸಪ್ಪ ಮತ್ತೆ ನಾಲ್ಕು ಲಕ್ಷ ಹಣ ಕಟ್ಟುವಂತೆ ಒತ್ತಾಯ ಮಾಡಿದ್ದಾರೆ. ಎರಡು ಲಕ್ಷ ಕಟ್ಟುತ್ತೇವೆ ಎಂದಿದ್ದಾರೆ. ಆದರೆ ಇದಕ್ಕೆ ಒಪ್ಪದ ಸಿಬ್ಬಂದಿ ಇಂದು ಏಕಾಏಕಿ ಬಂದು ಮನೆ ಸೀಜ್ ಮಾಡಿದ್ದು, ಬಟ್ಟೆ, ಅಡುಗೆ ಸಾಮಾಗ್ರಿ ಸೇರಿ ಎಲ್ಲವೂ ಮನೆಯಲ್ಲೇ ಇದ್ದು, ತಿನ್ನಲು ಕೂಡ ಎನೂ ಇಲ್ಲ ಸಂಪೂರ್ಣವಾಗಿ ಬೀದಿಗೆ ಬಿದ್ದಂಗಿದೆ.