ಬೆಂಗಳೂರು:– ಹೊಸವರ್ಷಕ್ಕೆ ಪೊಲೀಸ್ ಕಮಿಷನರ್ ರಿಂದ ಮತ್ತೊಂದು ಮಾದರಿ ಕಾರ್ಯ ನಡೆದಿದೆ.
ಪೊಲೀಸ್ ಕಮಿಷನರ್ ಬಿ ದಯಾನಂದ್ ಅವರು, ಡಾ.ರಾಜ್ ಕುಮಾರ್ ನೇತ್ರದಾನ ಕೇಂದ್ರಕ್ಕೆ ಕಣ್ಣುದಾನ ಮಾಡಿ ಹಲವು ಪೊಲೀಸರಿಗೆ ಮಾದರಿ ಆಗಿದ್ದಾರೆ. ನಾರಾಯಣ ನೇತ್ರಾಲಯ ರಾಜ್ ಕುಮಾರ್ ನೇತ್ರದಾನ ಕೇಂದ್ರದಿಂದ ಕಮಿಷನರ್ ಗೆ ಪ್ರಶಂಸನಾ ಪತ್ರ ಬರೆಯಲಾಗಿದೆ.
ಈ ಬಾರಿ ಹೊಸವರ್ಷಕ್ಕೆ ಸಿಹಿ ತಿನಿಸು ಹೂ ಗುಚ್ಚ ಬೇಡ ಎಂದು ಕಮಿಷನರ್ ಹೇಳಿದ್ದರು. ಯಾರು ಹೂ ಗುಚ್ಚ ನೀಡಿ ಶುಭಕೋರಲು ಬರಬೇಡಿ. ಅದರ ಬದಲಿಗೆ ತಮ್ಮ ವ್ಯಾಪ್ತಿಯ ಅನಾಥಾಶ್ರಮಗಳಿಗೆ ಕೈಯ್ಯಲ್ಲಾದ ಸಹಾಯ ಮಾಡಿ ಎಂದು ದಯಾನಂದ್ ಹೇಳಿದ್ದಾರೆ.