ಕಲಬುರ್ಗಿ:- ಕಲಬುರಗಿಯಲ್ಲಿ ಮತ್ತೊಂದು ಪರೀಕ್ಷೆ ಅಕ್ರಮ ಕೇಳಿ ಬಂದಿದ್ದು, ಅವಧಿ ಮುಗಿದ ನಂತರವೂ ಖಾಸಗಿ ಕಾಲೇಜು ಪರೀಕ್ಷೆ ಬರೆಸಿದೆ.
ಎಂ.ಜಿ.ರಸ್ತೆಯ ಯುನೈಟೆಡ್ ಡಿಗ್ರಿ ಖಾಸಗಿ ಕಾಲೇಜಿನಲ್ಲಿ ಬಿಸಿಎ ಫಸ್ಟ್ ಸೆಮಿಸ್ಟರ್ ಗಣಿತ ಪರೀಕ್ಷೆ (exam) ಯಲ್ಲಿ ಅವಧಿ ಮುಗಿದ 15 ನಿಮಿಷ ನಂತರವೂ ಪರೀಕ್ಷೆ ಬರೆಸಲಾಗಿದೆ
ಅಕ್ರಮ ಹಿನ್ನೆಲೆ ಪರೀಕ್ಷಾ ಕೊಠಡಿಗೆ ಎಬಿವಿಪಿ ಕಾರ್ಯಕರ್ತರಿಂದ ಲಗ್ಗೆ ಇಡಲಾಗಿದ್ದು, ಪರೀಕ್ಷಾ ಅಕ್ರಮದ ಬಗ್ಗೆ ರೆಡ್ಹ್ಯಾಂಡ್ ಆಗಿ ಹಿಡಿದಿದ್ದಾರೆ. ಆದರೆ ಯುನೈಟೆಡ್ ಡಿಗ್ರಿ ಕಾಲೇಜು ಸಿಬ್ಬಂದಿ ಆರೋಪ ನಿರಾಕರಿಸಿದ್ದಾರೆ. 80 ವಿದ್ಯಾರ್ಥಿಗಳಿಗೆ ಪ್ರಶ್ನೆ ಪತ್ರಿಕೆಗಳು ಕಡಿಮೆ ಬಂದಿದ್ದವು. ಜೆರಾಕ್ಸ್ ಮಾಡಿಸಿ ಹಂಚಿಕೆ ಮಾಡಲು 15 ನಿಮಿಷ ವಿಳಂಬವಾಗಿದೆ. ಹೀಗಾಗಿ 80 ವಿದ್ಯಾರ್ಥಿಗಳಿಗೆ 15 ನಿಮಿಷ ಹೆಚ್ಚುವರಿಯಾಗಿ ಕೊಟ್ಟಿದ್ದೇವೆ. ಯಾವುದೇ ಅಕ್ರಮ ನಡೆಸಿಲ್ಲವೆಂದು ಖಾಸಗಿ ಕಾಲೇಜಿನ ಆಡಳಿತ ಮಂಡಳಿ ಹೇಳಿದೆ.