ಗದಗ: ಕೋಡಿಹಳ್ಳಿ ಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು ರಾಜ್ಯ ಮತ್ತು ದೇಶಗಳ ಬೆಳವಣಿಗೆಗಳ ಬಗ್ಗೆ ಭವಿಷ್ಯ ನುಡಿಯುತ್ತಿರುತ್ತಾರೆ ಅದೇ ರೀತಿ ಈಗಲೂ ಸಹ ಮತ್ತೊಂದು ಭವಿಷ್ಯ ನುಡಿದಿದ್ದಾರೆ. 2024 ರಲ್ಲಿ ಜಗತ್ತಿಗೆ ಒಳ್ಳೆಯ ದಿನಗಳಿಲ್ಲ. 2024 ರಲ್ಲಿ ಅಣು ಬಾಂಬ್ ಸ್ಪೋಟಗೊಳ್ಳುವ ಸಾಧ್ಯತೆ ಇದೆ. ಯುದ್ಧದ ಭೀತಿ ಇದೆ. ಜನರು ತಲ್ಲಣ ಆಗುವಂತಹದ್ದಿದೆ. ಜಲ ಕಂಠಗಳು ಹೆಚ್ಚಾಗುವ ಸಾಧ್ಯತೆ ಇದೆ ಅಂತ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳು ಭವಿಷ್ಯ ನುಡದಿದ್ದಾರೆ.
ನಗರದ ಭಕ್ತರ ಮನೆಯೊಂದರಲ್ಲಿ ಮಾತನಾಡಿದ ಶ್ರೀಗಳು, ಜಗತ್ತಿನ ಅತೀ ದೊಡ್ಡ ಸಂತರೊಬ್ಬರು ಕೊಲೆಗೀಡಾಗುವ ಲಕ್ಷಣ ಇದೆ. ಒಂದೆರಡು ಪ್ರಧಾನಿಗಳ ಸಾವು ಆಗಲಿವೆ ಅಂತ ಅಘಾತಕಾರಿ ವಿಷಯ ತಿಳಿಸಿದ್ದಾರೆ. ಅಸ್ಥಿರತೆ ಇದೆ, ಯುದ್ಧದ ಭೀತಿ ಇದೆ. ಅಣು ಬಾಂಬ್ ಸ್ಪೋಟದಿಂದ ಜಗತ್ತಿಗೆ ಹಾನಿಯಾಗುವ ಸಾಧ್ಯತೆ ಇದೆ. ಇದರಿಂದ ರೋಗ ರುಜಿನಗಳು ಹೆಚ್ಚಾಗಲಿವೆ. ಒಟ್ಟಿನಲ್ಲಿ 2024 ಜಗತ್ತಿಗೆ ಅಪಾಯವಿದೆ. ಜಗತ್ತಿನಲ್ಲಿ ಭಾರತವೂ ಸೇರಿಕೊಳ್ಳುತ್ತೆ ಎಂದರು.
ಶ್ರೀರಾಮಂದಿರ ವಿಷಯದಲ್ಲಿ ಹಿಂದೂಗಳು ಒಂದಾಗಬೇಕು ಎಂಬ ಪೇಜಾವರ ಶ್ರೀಗಳ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದರು. ಹಿಂದೂಗಳು ಒಂದಾದ್ರೆ ಒಳ್ಳೆಯದು ಅನಿಸುತ್ತೆ. ಭಾರತೀಯರು ಒಗ್ಗಟ್ಟಾದ್ರೆ ಎಲ್ಲರಿಗೂ ಒಳ್ಳೆಯದಾಗುತ್ತೆ. ದಶವತಾರ ಎಷ್ಟು? ವಿಷ್ಣುವಿನ ಅವತಾರ ಎಷ್ಟು? 10 ತಾನೇ, 11 ಆಗಲಿಲ್ಲ. ಸ್ವಲ್ಪ ಮತೀಯ ಸಮಸ್ಯೆಗಳು ಉದ್ಭವವಾಗಿ ಜನರು ದುಃಖ ಅನುಭವಿಸುತ್ತಾರೆ. ಎಲ್ಲದಕ್ಕೂ ದೈವ ಮೊರೆ ಹೋಗಬೇಕು. ಯುಗಾದಿ ನಂತರ ರಾಜಕೀಯ ಬಗ್ಗೆ ಹೇಳುತ್ತೇನೆ. ಈಗ ಸೂಕ್ಷ್ಮವಾಗಿ ದಶವತಾರ ಬಗ್ಗೆ ಹೇಳಿ ಎಂದು ದಶವತಾರ ಬಗ್ಗೆ ಸೂಕ್ಷವಾಗಿ ಪ್ರಸ್ತಾಪಿಸಿದ್ದಾರೆ.