ಬೆಂಗಳೂರು: ಭಾರತ ತಂಡದ ಸ್ಟಾರ್ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ ಹೆಸರು ವಿಶ್ವಮಟ್ಟದಲ್ಲಿ ಕೇಳಿಬರುತ್ತಿದೆ. ವಿರಾಟ್ ತಮ್ಮ ಬ್ಯಾಟ್ನಿಂದ ಜಗತ್ತನ್ನೇ ಗೆದ್ದಿದ್ದಾರೆ. ವಿರಾಟ್ ಕೊಹ್ಲಿ ಅವರ ಐಸಿಸಿ ಪ್ರಶಸ್ತಿಗಳ ಪಟ್ಟಿಯಿಂದ ವಿಶ್ವ ಮಟ್ಟದ ಆಟಗಾರ ಎಂದು ಊಹಿಸಬಹುದು. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಕೊಹ್ಲಿಯನ್ನ 50 ಕೋಟಿಗೂ ಹೆಚ್ಚು ಮಂದಿ ಫಾಲೋ ಮಾಡ್ತಾರೆ.
ಹೈಯೆಸ್ಟ್ ಫಾಲೋವರ್ಸ್ ಹೊಂದಿರೋ ಕ್ರೀಡಾಪಟುಗಳ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದಾರೆ. ಈಗ ಕೊಹ್ಲಿಯ ಆಫ್ ದಿ ಫೀಲ್ಡ್ ದಾಖಲೆಗಳ ಪಟ್ಟಿಗೆ ಮತ್ತೊಂದು ದಾಖಲೆ ಸೇರಿದೆ. ಭಾರತದ ಮೋಸ್ಟ್ ವ್ಯಾಲ್ಯೂಡ್ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ನಂ.1 ಪಟ್ಟ ಅಲಂಕರಿಸಿದ್ದಾರೆ. ಯೆಸ್, ಈ ವರ್ಷ ಕೊಹ್ಲಿಯ ಬ್ರ್ಯಾಂಡ್ ವ್ಯಾಲ್ಯೂ ಶೇಕಡ 29ರಷ್ಟು ಅಂದ್ರೆ, 227.9 ಮಿಲಿಯನ್ ಡಾಲರ್ಗೆ ಏರಿಕೆಯಾಗಿದೆ. ಕೊಹ್ಲಿ ನಂತರದ ಸ್ಥಾನದಲ್ಲಿ ಬಾಲಿವುಡ್ ಸ್ಟಾರ್ ರಣ್ವೀರ್ ಸಿಂಗ್ ಇದ್ದು,
ರಣ್ವೀರ್ 203.1 ಮಿಲಿಯನ್ ಡಾಲರ್ ಮೌಲ್ಯ ಹೊಂದಿದ್ದಾರೆ. ಅಕ್ಷಯ್ ಕುಮಾರ್, ಅಲಿಯಾ ಭಟ್ 3 ಮತ್ತು ನಾಲ್ಕನೇ ಸ್ಥಾನ ಅಲಂಕರಿಸಿದ್ದಾರೆ. ಕ್ರಿಕೆಟರ್ಗಳಲ್ಲಿ ಧೋನಿ 7ನೇ ಸ್ಥಾನ, ಸಚಿನ್ ತೆಂಡುಲ್ಕರ್ 8ನೇ ಸ್ಥಾನ ಗಳಿಸಿದ್ದಾರೆ. ಇನ್ನೂ ಲಂಡನ್ನಲ್ಲಿ ಠಿಕಾಣಿ ಹೂಡಿರೋ ವಿರಾಟ್ ಕೊಹ್ಲಿ, ಪತ್ನಿ ಅನುಷ್ಕಾ ಮತ್ತು ಇಬ್ಬರು ಮಕ್ಕಳ ಜೊತೆ ಕಾಲ ಕಳೆಯುತ್ತಿದ್ದಾರೆ. ದೊಡ್ಡ ಸೆಲೆಬ್ರೆಟಿಯಾಗಿದ್ರೂ, ಸಾಮಾನ್ಯರಂತೆ ಜೀವನ ನಡೆಸುತ್ತಿದ್ದಾರೆ.