ಪಾಕ್ ತಂಡದಲ್ಲಿ ಮತ್ತೊಂದು ವಿವಾದ ಸೃಷ್ಟಿ ಆಗಿದ್ದು, ಮುಖ್ಯ ಕೋಚ್ ಹುದ್ದೆಗೆ ಜೇಸನ್ ಗಿಲ್ಲೆಸ್ಪಿ ಗುಡ್ಬೈ ಹೇಳಿದ್ದಾರೆ.
ಹಲವು ತಿಂಗಳುಗಳ ನಂತರ ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಸರಣಿ ಮತ್ತು ಏಕದಿನ ಸರಣಿಯನ್ನು ಪಾಕಿಸ್ತಾನ ಗೆಲ್ಲುವಂತೆ ಮಾಡಿದ ಕೋಚ್ ಜೇಸನ್ ಗಿಲ್ಲೆಸ್ಪಿ ಅವರನ್ನು ಮುಖ್ಯ ಕೋಚ್ ಹುದ್ದೆಯಿಂದ ವಜಾಗೊಳಿಸಲು ಪಾಕ್ ಮಂಡಳಿ ಮುಂದಾಗಿದೆ ಎಂದು ವರದಿಯಾಗಿದೆ.
ಕರ್ನಾಟಕದಲ್ಲಿ 10 ಸಾವಿರ BPL ಕಾರ್ಡ್ ರದ್ದತಿ: ಇದು ಸರ್ಕಾರ ದಿವಾಳಿ ಆಗಿರುವುದಕ್ಕೆ ಸಾಕ್ಷಿ ಎಂದ ಜೋಶಿ!
ಪಾಕಿಸ್ತಾನ ಕ್ರಿಕೆಟ್ ಮಂಡಳಿ ಕೇವಲ 6 ತಿಂಗಳೊಳಗೆ ಗಿಲ್ಲೆಸ್ಪಿ ಅವರನ್ನು ಮುಖ್ಯ ಕೋಚ್ ಹುದ್ದೆಯಿಂದ ತೆಗೆದುಹಾಕಲು ನಿರ್ಧರಿಸಿದೆ. ಕಳೆದ ತಿಂಗಳು, ಗ್ಯಾರಿ ಕರ್ಸ್ಟನ್ ಕೂಡ ಪಾಕಿಸ್ತಾನಿ ಮಂಡಳಿಯೊಂದಿಗಿನ ಭಿನ್ನಾಭಿಪ್ರಾಯದಿಂದಾಗಿ ತಂಡದ ಕೋಚ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದೀಗ ESPN-Cricinfo ವರದಿಯ ಪ್ರಕಾರ,
ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಪ್ರಸ್ತುತ ಎಲ್ಲಾ ಮೂರು ಸ್ವರೂಪಗಳ ಮುಖ್ಯ ಕೋಚ್ ಆಗಿರುವ ಗಿಲ್ಲೆಸ್ಪಿಯನ್ನು ಈ ಹುದ್ದೆಯಿಂದ ತೆಗೆದುಹಾಕಲು ನಿರ್ಧರಿಸಿದೆ. ಗಿಲ್ಲೆಸ್ಪಿ ಪ್ರಸ್ತುತ ಪಾಕಿಸ್ತಾನಿ ತಂಡದೊಂದಿಗೆ ಆಸ್ಟ್ರೇಲಿಯಾದಲ್ಲಿದ್ದಾರೆ. ಅವರ ನೇತೃತ್ವದಲ್ಲಿ ಪಾಕಿಸ್ತಾನ, ಆಸ್ಟ್ರೇಲಿಯಾವನ್ನು ಏಕದಿನ ಸರಣಿಯಲ್ಲಿ ಮಣಿಸಿತ್ತು. ಆದರೆ ಟಿ20 ಸರಣಿ ಗೆಲ್ಲುವಲ್ಲಿ ವಿಫಲವಾಗಿದೆ. ಇದೀಗ ನವೆಂಬರ್ 18 ರಂದು ಸೋಮವಾರ ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ನಡುವೆ ಮೂರನೇ ಟಿ20 ಪಂದ್ಯ ನಡೆಯಲಿದ್ದು, ಇದು ಗಿಲ್ಲೆಸ್ಪಿ ತರಬೇತುದಾರರಾಗಿ ಕೊನೆಯ ಪಂದ್ಯ ಎಂದು ಹೇಳಲಾಗುತ್ತಿದೆ.
ಪಿಸಿಬಿ ಈ ವರ್ಷದ ಮೇ ತಿಂಗಳಿನಲ್ಲಿಯೇ ಕರ್ಸ್ಟನ್ ಮತ್ತು ಗಿಲ್ಲೆಸ್ಪಿ ಅವರನ್ನು ತಂಡದ ಮುಖ್ಯ ಕೋಚ್ಗಳಾಗಿ ನೇಮಿಸಿತ್ತು. ಕರ್ಸ್ಟನ್ ಅವರನ್ನು ಏಕದಿನ ಮತ್ತು ಟಿ20 ಮಾದರಿಗೆ ತರಬೇತುದಾರರಾಗಿ ನೇಮಿಸಿದರೆ, ಗಿಲ್ಲೆಸ್ಪಿ ಅವರನ್ನು ಟೆಸ್ಟ್ ಸ್ವರೂಪಕ್ಕೆ ಮುಖ್ಯ ಕೋಚ್ ಆಗಿ ನೇಮಿಸಲಾಗಿತ್ತು. ಆದರೆ ಕರ್ಸ್ಟನ್ ಕಳೆದ ತಿಂಗಳಷ್ಟೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ಹೀಗಾಗಿ ಪಿಸಿಬಿ, ಸ್ವಲ್ಪ ಸಮಯದವರೆಗೆ ಗಿಲ್ಲೆಸ್ಪಿಯನ್ನು ಮೂರು ಮಾದರಿಗೂ ಕೋಚ್ ಆಗಿ ನೇಮಿಸಿತ್ತು.
ಗಿಲ್ಲೆಸ್ಪಿ ಅವರ ಮಾರ್ಗದರ್ಶನದಲ್ಲಿ ಪಾಕ್ ತಂಡ ಮತ್ತೆ ಗೆಲುವಿನ ಲಯಕ್ಕೆ ಮರಳಿದೆ. ಹೀಗಾಗಿ ಪಿಸಿಬಿ, ಚಾಂಪಿಯನ್ಸ್ ಟ್ರೋಫಿಯವರೆಗೆ ಎಲ್ಲಾ ಮೂರು ಸ್ವರೂಪಗಳಲ್ಲಿ ಗಿಲ್ಲೆಸ್ಪಿ ಅವರನ್ನು ತಂಡದ ಮುಖ್ಯ ತರಬೇತುದಾರರಾಗಿ ಮುಂದುವರೆಸಲು ಬಯಸಿದೆ. ಆದರೆ ಅವರ ವೇತನ ಒಪ್ಪಂದದಲ್ಲಿ ಮಾತ್ರ ಯಾವುದೇ ಬದಲಾವಣೆಗಳನ್ನು ಮಾಡಲು ಪಿಸಿಬಿ ಸಿದ್ದವಿಲ್ಲ ಎಂದು ಕ್ರಿಕ್ಇನ್ಫೋ ವರದಿ ಹೇಳುತ್ತಿದೆ. ಅಂದರೆ ಗಿಲ್ಲೆಸ್ಪಿ ಅವರನ್ನು ಎಲ್ಲಾ ಮೂರು ಸ್ವರೂಪಗಳಿಗೆ ತರಬೇತುದಾರರಾಗಿ ಆಯ್ಕೆ ಮಾಡಿದರೂ ಅವರಿಗೆ ಕೇವಲ ಟೆಸ್ಟ್ ತರಬೇತುದಾರರಾಗಿ ನೀಡುತ್ತಿದ್ದ ವೇತನವನ್ನು ನೀಡಲು ಪಿಸಿಬಿ ಮುಂದಾಗಿದೆ.
ಆದರೆ ಪಿಸಿಬಿಯ ಈ ಪ್ರಸ್ತಾಪವನ್ನು ಗಿಲ್ಲೆಸ್ಪಿ ತಿರಸ್ಕರಿಸಿದ್ದಾರೆ. ಇದರಿಂದಾಗಿ ಅಸಮಾಧಾನಗೊಂಡಿರುವ ಪಿಸಿಬಿ, ಗಿಲ್ಲೆಸ್ಪಿ ಅವರನ್ನು ಎಲ್ಲಾ ಮೂರು ಸ್ವರೂಪಗಳ ಕೋಚಿಂಗ್ ಹುದ್ದೆಯಿಂದ ತೆಗೆದುಹಾಕಲು ನಿರ್ಧರಿಸಿದೆ.