ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ತನ್ನ ವಿವಿಧ ಸೇವೆಗಳನ್ನು ನೀಡಲು ಹಣ ನಿಗದಿ ಮಾಡಿದೆ. ಇದಕ್ಕಾಗಿ ಬ್ಯಾಂಕ್ ಆಫ್ ಬರೋಡಾದಲ್ಲಿ ಪ್ರಾಧಿಕಾರದ ಬ್ಯಾಂಕ್ ಖಾತೆ ಇದೆ. ಜನರು ಅಲ್ಲಿ ಹಣ ಕಟ್ಟಿ ಚಲನ್ ಪಡೆದು ಅದನ್ನು ಪ್ರಾಧಿಕಾರದ ಸಂಬಂಧಪಟ್ಟ ಶಾಖೆಗೆ ನೀಡಿದರೆ ಅವರಿಗೆ ಆ ಸೇವೆ ನೀಡಲಾಗುತ್ತದೆ.
ಕಳೆದ ವರ್ಷ ಹೀಗೆ ಚಲನ್ ಕಟ್ಟಿ ಸೇವೆ ಪಡೆದ ಒಟ್ಟು 93 ಜನರ ಹಣ ಪ್ರಾಧಿಕಾರಕ್ಕೆ ಬಂದಿಲ್ಲ. ಇದರ ಮೊತ್ತ 1 ಕೋಟಿ ರು. ಇದೆ. ಹೀಗಾಗಿ ಪ್ರಾಧಿಕಾರದ ಹಣಕಾಸು ಶಾಖೆ ಅವರು ಬ್ಯಾಂಕ್ ಬರೋಡಾದ ವ್ಯವಸ್ಥಾಪಕರಿಗೆ ಪತ್ರ ಬರೆದು 93 ಜನರು ಕಟ್ಟಿರುವ ಹಣ ನಮಗೆ ಡೆಪಾಸಿಟ್ ಮಾಡಿ ಎಂದು ಕೇಳಿದ್ದಾರೆ. ಈ ಪತ್ರಕ್ಕೆ ಬ್ಯಾಂಕ್ ಬರೋಡಾ ವ್ಯವಸ್ಥಾಪಕರು ಉತ್ತರ ನೀಡಿ ನೀವು ಕೇಳಿರುವ 93 ಜನರ ಹಣ ಬ್ಯಾಂಕ್ಗೆ ಸಂದಾಯವೇ ಆಗಿಲ್ಲ ಎಂದು ಉತ್ತರ ಕೊಟ್ಟಿದ್ದಾರೆ.
Weight Loss: ಬೇಗನೇ ತೂಕ ಕಳೆದುಕೊಳ್ಳಬೇಕೇ? ದಿನದ ಈ ಸಮಯದಲ್ಲಿ ಚಿಯಾ ಸೀಡ್ಸ್ ಸೇವಿಸಿ
ಅಲ್ಲಿಗೆ ಬ್ಯಾಂಕ್ ಚಲನ್ ಹಾಗೂ ಬ್ಯಾಂಕ್ ಸ್ಹೀಲ್ ಎರಡು ನಕಲಿ ಮಾಡಿಕೊಂಡು ಹಣ ವಂಚಿಸಿರುವುದು ಗೊತ್ತಾಗಿದೆ. ಬ್ಯಾಂಕ್ನ ಕೆಲ ಸಿಬ್ಬಂದಿ ಹಾಗೂ ಮೂಡಾ ಕೆಲ ನೌಕರರು ಸೇರಿ ಗ್ರಾಹಕರಿಂದ ಹಣ ಪಡೆದು ಅವರಿಗೆ ನಕಲಿ ಸ್ಹೀಲ್ ಹಾಕಿರುವ ಚಲನ್ ಕೊಟ್ಟು ನಿರ್ದಿಷ್ಟ ಸೇವೆಯನ್ನು ಗ್ರಾಹಕನಿಗೆ ನೀಡದೇ ಮೂಡಾ ಸೇರಬೇಕಾದ ಹಣವನ್ನು ತಮ್ಮ ಜೇಬಿಗೆ ಇಳಿಸಿದ್ದಾರೆ.