ಹಾಸನ : ಹಾಸನದಲ್ಲಿ ಮತ್ತೊಂದು ಎಟಿಎಂ ಮಿಷನ್ ಕಳುವಾಗಿದೆ. ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಉದಯಪುರ ಗ್ರಾಮದಲ್ಲಿ ತಡರಾತ್ರಿ ಘಟನೆ ನಡೆದಿದೆ. ರಾಷ್ಟ್ರೀಯ ಹೆದ್ದಾರಿ 75ರ ಬೆಂಗಳೂರು-ಮಂಗಳೂರು ರಸ್ತೆಯ ಪಕ್ಕದಲ್ಲೇ ಇರುವ ಎಟಿಎಂ ನಲ್ಲಿ ಹಣದ ಸಮೇತ ಎಟಿಎಂ ಮಿಷನ್ ಕಳ್ಳತನ ಮಾಡಲಾಗಿದೆ.
ಎಟಿಎಂನಲ್ಲಿದ್ದ ಲಕ್ಷಾಂತರ ರೂ ಹಣವಿದ್ದ ಇಂಡಿಯನ್ ಬ್ಯಾಂಕ್ನ ಎಟಿಎಂ ಮಿಷನ್ ನನ್ನು ಖದೀಮರು ಕದ್ದೊಯ್ದಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು, ಶ್ವಾನದಳ, ಬೆರಳಚ್ಚು ತಜ್ಞರು ಭೇಟಿ, ಪರಿಶೀಲನೆ ನಡೆಸಿದ್ದಾರೆ, ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಕಳೆದ ಜ.29ರಂದು ಹಾಸನದ ಹನುಮಂತಪುರದಲ್ಲಿ ಇದೇ ರೀತಿ ಎಟಿಎಂ ಮಿಷನ್ ಕಳುವಾಗಿತ್ತು. ಇದೀಗ ಹದಿನೈದು ದಿನಗಳ ಅಂತರದಲ್ಲಿ ಮತ್ತೊಂದು ಎಟಿಎಂ ಮಿಷನ್ ಕಳ್ಳತನ ನಡೆದಿದೆ.