ಬಣ್ಣದ ಬದುಕಿನಲ್ಲಿ ಡಿವೋರ್ಸ್ ಅನ್ನೋದು ಕಾಮನ್ ಅನ್ನೋ ಹಾಗಾಗಿದೆ. ಕಳೆದ ಎರಡು ಮೂರು ವರ್ಷಗಳಿಂದ ಒಬ್ಬರ ಹಿಂದೊಬ್ಬರಂತೆ ನಟಿ, ನಟಿಯರು ಡಿವೋರ್ಸ್ ಪಡೆದುಕೊಳ್ತಿದ್ದಾರೆ. ಇದೀಗ ಕಾಲಿವುಡ್ ಸುಂದರಿ, ಮಾಜಿ ಬಿಗ್ ಬಾಸ್ ಸ್ಪರ್ಧಿ ಸಂಯುಕ್ತ ಷಣ್ಮುಗನಾಥನ್ ಡಿವೋರ್ಸ್ ಘೋಷಿಸಿದ್ದಾರೆ. ಈ ಮೂಲಕ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ.
ಇನ್ಸ್ಟಾಗ್ರಾಮ್ ನಲ್ಲಿ ಚಿತ್ರಗಳನ್ನು ಹಂಚಿಕೊಂಡ ನಟಿ ಸಂಯುಕ್ತ, ” 2025 ಮತ್ತು ನಾನು ಅಂತಿಮವಾಗಿ ನನ್ನ ಕಾಗದದ ಕೆಲಸವನ್ನು ಮುಗಿಸಿದೆ! ಎಂದಿಗಿಂತಲೂ ಬಲಶಾಲಿ ” ಎಂದು ಬರೆದಿದ್ದಾರೆ.ಗಲಾಟ್ಟಾ ತಮಿಳ್ಗೆ ನೀಡಿದ ಹಿಂದಿನ ಸಂದರ್ಶನದಲ್ಲಿ, ಸಂಯುಕ್ತಾ ತಮ್ಮ ವಿವಾಹದ ಬಗ್ಗೆ ಮಾತನಾಡಿದ್ದರು. ನಟಿ ತಮ್ಮ ಪತಿಗೆ ವಿವಾಹೇತರ ಸಂಬಂಧವಿದೆ ಇದೆ ಎಂದು ಹೇಳಿದ್ದು ಇದೇ ಕಾರಣಕ್ಕೆ ಡಿವೋರ್ಸ್ ಪಡೆದುಕೊಳ್ತಿರೋದಾಗಿ ಹೇಳಿದ್ದಾರೆ.
“ಕೋವಿಡ್ ಸಮಯದಲ್ಲಿ ನನ್ನ ಪತಿ ನಾಲ್ಕು ವರ್ಷಗಳಿಗೂ ಹೆಚ್ಚು ಕಾಲ ದುಬೈನಲ್ಲಿ ಬೇರೊಬ್ಬರೊಂದಿಗೆ ವಾಸಿಸುತ್ತಿದ್ದಾರೆಂದು ನನಗೆ ತಿಳಿದುಬಂದಿತ್ತು. ಏನು ಮಾಡಬೇಕೆಂದು ತಿಳಿಯಲಿಲ್ಲ. ಲಾಕ್ಡೌನ್ನಿಂದಾಗಿ ನಾನು ಎಲ್ಲಿಯೂ ಪ್ರಯಾಣಿಸಲು ಸಾಧ್ಯವಾಗಲಿಲ್ಲ.”ಎಂದು ಹೇಳಿಕೊಂಡಿದ್ದರು.
ಸಂಯುಕ್ತಾ ಅವರು ಉದ್ಯಮಿ ಕಾರ್ತಿಕ್ ಶಂಕರ್ ಅವರನ್ನು ವಿವಾಹವಾದರು. ದಂಪತಿಗೆ ರಾಯನ್ ಎಂಬ ಮಗನಿದ್ದಾನೆ. 2007ರಲ್ಲಿ ಮಿಸ್ ಚೆನ್ನೈ ಕಿರೀಟವನ್ನು ಮುಡಿಗೇರಿಸಿಕೊಂಡ ಚೆಲುವೆ.ತುಘ್ಲಕ್ ದರ್ಬಾರ್, ವಾರಿಸು, ಸೇರಿ ಹಲವು ಚಿತ್ರಗಳಲ್ಲಿ ಆ ನಂತರ ಕಾಣಿಸಿಕೊಂಡ ಸಂಯುಕ್ತಾ 2020ರಲ್ಲಿ ತಮಿಳಿನ ಬಿಗ್ ಬಾಸ್ ಸೀಸನ್ ನಾಲ್ಕರಲ್ಲಿ ಸ್ಫರ್ಧಿಯಾಗಿದ್ದರು.
ಹೀಗೆ ತಮ್ಮ ಪತಿಯಿಂದ ಮೋಸಕ್ಕೊಳಗಾದ ಸಂಯುಕ್ತಾ ಸದ್ಯ ವೈವಾಹಿಕ ಜೀವನಕ್ಕೆ ಗುಡ್ ಬೈ ಹೇಳಲು ನಿರ್ಧಾರ ಮಾಡಿದ್ದಾರೆ. ಫೋಟೊಶೂಟ್ ಮೂಲಕ ವಿಚಾರವನ್ನು ತಿಳಿಸಿದ್ದಾರೆ. ಸದ್ಯ ಅನೇಕರು ಸಂಯುಕ್ತಾ ಅವರಿಗೆ ಸೋಶಿಯಲ್ ಮೀಡಿಯಾ ಮೂಲಕ ಧೈರ್ಯ ತುಂಬುತ್ತಿದ್ದಾರೆ.