ಮೈಸೂರು:- ಸ್ನೇಹಮಯಿ ಹೆಸರು ಹೇಳಿಕೊಂಡು ಪೊಲೀಸರಿಗೆ ಅನಾಮಧೇಯ ಪತ್ರ ಬರುತ್ತಿದ್ದು, ಇದೀಗ ದೂರು ದಾಖಲಾಗಿದೆ.
ವೈಕುಂಠ ಏಕಾದಶಿ ಸಂಭ್ರಮ: ಬೆಂಗಳೂರಿನ ತಿಮ್ಮಪ್ಪನ ದರ್ಶನಕ್ಕೆ ದೇವಸ್ಥಾನಗಳಲ್ಲಿ ಭಕ್ತ ಸಾಗರ!
ಜಯಪುರ ಪೊಲೀಸ್ ಠಾಣೆಗೆ ಗಿರೀಶ್ ಎಂಬುವವರ ವಿರುದ್ಧ ದೂರು ಹೋಗಿದೆ. ಅಸಲಿಗೆ ಗಿರೀಶ್ ಯಾರು ಎಂಬುದೇ ಸ್ನೇಹಮಹಿ ಕೃಷ್ಣಗೆ ಗೊತ್ತಿಲ್ಲ. ವಿಚಾರಣೆ ಹೋದಾಗಲೇ ತಮ್ಮ ಹೆಸರು ದುರ್ಬಳಕೆಯಾಗಿರುವುದು ಸ್ನೇಹಮಹಿ ಕೃಷ್ಣಗೆ ಗೊತ್ತಾಗಿದೆ.
ಸಂಚಾರಿ ಪೊಲೀಸರು ವಾಹನಗಳನ್ನ ತಪಾಸಣೆ ಮಾಡುವಾಗ ಸಿಕ್ಕಿ ಬಿದ್ದರೆ ನನ್ನ ಹೆಸರು ಹೇಳಿ ಶುಲ್ಕ ಕಟ್ಟದೇ ಹೋಗುತ್ತಿದ್ದಾರೆ. ಮೈಸೂರಿನ ಅರ್ಜುನ್ ಗೂರುಜಿ ವಿರುದ್ಧವು ದೂರು ಹೋಗಿದೆ. ನನ್ನ ಹೆಸರನ್ನ ಯಾಕೆ ಬಳಸಿಕೊಳ್ಳುತ್ತಿದ್ದಾರೆ ಗೊತ್ತಾಗುತ್ತಿಲ್ಲ. ಅವರ ವೈಯಕ್ತಿಕ ವಿಚಾರಕ್ಕೆ ನನಗೆ ಕೆಟ್ಟ ಹೆಸರು ತರುಲು ಪ್ರಯತ್ನ ಮಾಡುತ್ತಿದ್ದಾರೆ. ಈ ಬಗ್ಗೆ ಪೊಲೀಸರಿಗೆ ದೂರು ಕೊಟ್ಟರೆ ಕ್ರಮ ತೆಗೆದುಕೊಳ್ಳುವುದು ಕಷ್ಟವಾಗುತ್ತಿದೆ ಎಂದು ಸ್ನೇಹಮಯಿ ಕೃಷ್ಣ ಹೇಳಿದ್ದಾರೆ.