ಬೀದರ್: ಜೈಲಿನಿಂದ ಹೊರ ಬಂದ ಮುಖಂಡ ನಿಗೆ ಹಾಲಿನ ಅಭಿಷೇಕ ಮಾಡಲಾಯಿತು. ಹೌದು ಪಿಸ್ತೂಲ್ ತೋರಿಸಿ ಹಣ ವಸೂಲಿ ಮಾಡಿದ್ದ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ಜಿಲ್ಲಾ ಪಂಚಾಯತ ಮಾಜಿ ಸದಸ್ಯನಿಗೆ ಅಭಿಮಾನಿಗಳು ಹಾಲಿನ ಅಭಿಷೇಕ ಮಾಡಿರುವ ಘಟನೆ ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಹಣಮಂತವಾಡಿ ಗ್ರಾಮದಲ್ಲಿ ನಡೆದಿದೆ. ಪಿಸ್ತೂಲ್ ಹಿಡಿದ ಹಣ ವಸೂಲಿ ಮಾಡಿದ ಹಿನ್ನಲೆ ಪೊಲಿಸರು ಪ್ರಕರಣ ದಾಖಲಿಸಿ ಜೈಲಿಗಟ್ಟಿದ್ದರು.
Bengaluru: ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ರೋಡ್ ರೇಜ್ – ಯುವತಿ ಅಡ್ಡಗಟ್ಟಿ ಯುವಕರ ಪುಂಡಾಟ
ಜಿಲ್ಲಾ ಪಂಚಾಯತ ಮಾಜಿ ಸದಸ್ಯ ಗುಂಡುರಡ್ಡಿ ಜಾಮೀನು ಮೇಲೆ ಹೊರ ಬಂದ ತಕ್ಷಣ ಅವರ ಅಭಿಮಾನಿ ಬಳಗದಿಂದ ಹಾಲಿನ ಅಭಿಷೇಕ ಮಾಡಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದ್ದು, ಗ್ರಾಮದ ಮಂದಿರದಲ್ಲಿ ಎರಡು ನೂರು ಲೀಟರ್ ಹಾಲಿನಿಂದ ಅಭಿಷೇಕ್ ಮಾಡಿ ಹಾರ ಹಾಕಿ ಗುಂಡುರೆಡ್ಡಿ ಅಭಿಮಾನಿ ಬಳಗ ಸಂತಸಪಟ್ಟಿದೆ.