ಬೆಂಗಳೂರು: 6 ಪದವೀಧರ, ಶಿಕ್ಷಕರ ಕ್ಷೇತ್ರದಿಂದ ವಿಧಾನಪರಿಷತ್ಗೆ ಚುನಾವಣಾ ದಿನಾಂಕವನ್ನು ಚುನಾವಣಾ ಆಯೋಗ ಪ್ರಕಟಿಸಿದೆ. ಜೂ.3 ಕ್ಕೆ ಮತದಾನ ನಡೆಯಲಿದ್ದು, 6 ರಂದು ಮತ ಎಣಿಕೆ ನಡೆಯಲಿದೆ.
ಉದ್ಯೋಗ ಆಕಾಂಕ್ಷಿಗಳೇ ಗಮನಿಸಿ.. BBMPಯಲ್ಲಿ 11,307 ಗ್ರೂಪ್ ಡಿ ಹುದ್ದೆಗಳು ಖಾಲಿ ಇದೆ..! ಇಂದೇ ಅರ್ಜಿ ಸಲ್ಲಿಸಿ
ಯಾವ್ಯಾವ ಕ್ಷೇತ್ರಗಳಿಗೆ ಚುನಾವಣೆ?
ಬೆಂಗಳೂರು ಪದವೀಧರ ಕ್ಷೇತ್ರ, ವಾಯುವ್ಯ ಪದವೀಧರ ಕ್ಷೇತ್ರ, ನೈರುತ್ಯ ಪದವೀಧರ ಕ್ಷೇತ್ರ, ದಕ್ಷಿಣ ಶಿಕ್ಷಕರ ಕ್ಷೇತ್ರ, ನೈರುತ್ಯ ಶಿಕ್ಷಕರ ಕ್ಷೇತ್ರ, ಆಗ್ನೇಯ ಶಿಕ್ಷಕರ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.
ಚಂದ್ರಶೇಖರ್ ಬಿ.ಪಾಟೀಲ್, ಆಯನೂರು ಮಂಜುನಾಥ್, ಎ.ದೇವೇಗೌಡ, ವೈ.ಎ.ನಾರಾಯಣಸ್ವಾಮಿ, ಎಸ್.ಎಲ್.ಭೋಜೇಗೌಡ, ಮರಿತಿಬ್ಬೇಗೌಡ ಅವರ ಅವಧಿ ಜೂ.21 ರಂದು ಮುಗಿಯಲಿದೆ.