ಭುವನೇಶ್ವರ್: ಸ್ವೀಡನ್, ಇಟಲಿ, ದಕ್ಷಿಣ ಕೊರಿಯಾ, ತೈವಾನ್ ಮತ್ತು ಜಪಾನ್ ಮಹಿಳೆಯರಿಗೆ ಮುಟ್ಟಿನ ರಜೆಗಳನ್ನು ನೀಡುತ್ತವೆ. ಇದರ ಬೆನ್ನಲ್ಲೇ ಒಡಿಶಾ ಸರ್ಕಾರವು ತಮ್ಮ ರಾಜ್ಯದಲ್ಲಿ ಎಲ್ಲಾ ವೃತ್ತಿಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಒಂದು ದಿನದ ಮುಟ್ಟಿನ ರಜೆಯನ್ನು ನೀಡುತ್ತದೆ.ಮಹಿಳೆಯರು ವಾರ್ಷಿಕವಾಗಿ ಪ್ರಸ್ತುತ ಪಡೆಯುವ 15 ದಿನಗಳ ಸಾಂದರ್ಭಿಕ ರಜೆ (CL) ಹೊರತಾಗಿ ವಾರ್ಷಿಕವಾಗಿ 12 ದಿನಗಳ ಹೆಚ್ಚುವರಿ ರಜೆ ಸಿಗಲಿದೆ ಎಂದು ಸಿಎಂ ಕಚೇರಿ ಬಿಡುಗಡೆ ಮಾಡಿರುವ ಅಧಿಕೃತ ಪ್ರಕಟಣೆ ತಿಳಿಸಿದೆ.
ಮಹಿಳಾ ಉದ್ಯೋಗಿಗಳು ತಿಂಗಳಿಗೆ ಒಂದು ದಿನದ ವೇತನ ಸಹಿತ ಋತುಚಕ್ರದ ರಜೆಗೆ ಅರ್ಹರಾಗಿರುತ್ತಾರೆ ಎಂದು ಸ್ವಾತಂತ್ರ್ಯ ದಿನದಂದು ಉಪಮುಖ್ಯಮಂತ್ರಿ ಪ್ರವತಿ ಪರಿದಾ ಅವರು ಘೋಷಣೆಯನ್ನು ಮಾಡಿದ್ದರು. ಅದರನ್ವಯ ಸರ್ಕಾರ ಈಗ ಜಾರಿ ಮಾಡಿದೆ. ಹಿಂದಿನ ಬಿಜೆಡಿ ಸರ್ಕಾರವು ಕುಟುಂಬದ ಜವಾಬ್ದಾರಿಗಳು ಮತ್ತು ಮಹಿಳೆಯರ ವಿವಿಧ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ರಜೆ ಘೋಷಿಸಿತ್ತು. ಈಗ, ಮಹಿಳೆಯರಿಗೆ ಸಿಎಲ್ಗಳ ಸಂಖ್ಯೆ ಎರಡು ಪಟ್ಟು ಹೆಚ್ಚಾಗಿದೆ.
UIIC Jobs: ಯುನೈಟೆಡ್ ಇಂಡಿಯಾ ಇನ್ಶೂರೆನ್ಸ್ ಕಂಪನಿಯಲ್ಲಿ ಭರ್ಜರಿ ಉದ್ಯೋಗಾವಕಾಶ! ಬೇಗ ಅರ್ಜಿ ಹಾಕಿ
ಒಡಿಶಾ ಸರ್ಕಾರದ ಎಲ್ಲಾ ಮಹಿಳಾ ಉದ್ಯೋಗಿಗಳು ಪ್ರಸ್ತುತ ಪಡೆಯುವ 15 ದಿನಗಳನ್ನು ಹೊರತುಪಡಿಸಿ ವಾರ್ಷಿಕವಾಗಿ ಹೆಚ್ಚುವರಿ ಸಿಎಲ್ಗಳನ್ನು ಪಡೆಯಬಹುದು ಎಂದು ಅಧಿಕೃತ ಟಿಪ್ಪಣಿಯಲ್ಲಿ ಸರ್ಕಾರ ಮಂಗಳವಾರ ತಿಳಿಸಿದೆ. ಈ ಕುರಿತು ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ನಿರ್ದೇಶನ ನೀಡಿದ್ದಾರೆ ಎಂದು ತಿಳಿಸಿದೆ. ಈಗ, ಮಹಿಳಾ ಉದ್ಯೋಗಿಗಳಿಗೆ ಸಿಎಲ್ಗಳ ಸಂಖ್ಯೆ 27 ದಿನಗಳಾಗಿದ್ದು, ಪುರುಷರು 15 ದಿನಗಳ ಸಿಎಲ್ ಅರ್ಹರಾಗಿರುತ್ತಾರೆ.