ದಕ್ಷಿಣದ ಹೆಸರಾಂತ ನಿರ್ದೇಶಕ ವೆಟ್ರಿಮಾರನ್ (Vetrimaran) ಅನ್ನಪೂರ್ಣಿ ಸಿನಿಮಾದ ಪರವಾಗಿ ಮಾತನಾಡಿದ್ದಾರೆ. ನಯನತಾರಾ (Nayantara) ನಟನೆಯ ಅನ್ನಪೂರ್ಣಿ ಸಿನಿಮಾದ ವಿರುದ್ಧ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಅದನ್ನು ಓಟಿಟಿಯಿಂದ ತೆಗೆದು ಹಾಕಲಾಗಿತ್ತು. ಈ ಕ್ರಮವನ್ನು ಅವರು ವಿರೋಧಿಸಿದ್ದಾರೆ. ಸೆನ್ಸಾರ್ ಆದ ಮೇಲೂ ಈ ರೀತಿ ಒತ್ತಡ ಹಾಕುವುದು ಸರಿಯಾದದ್ದು ಅಲ್ಲವೆಂದು ಅವರು ಹೇಳಿದ್ದಾರೆ.
ಅನ್ನಪೂರ್ಣಿ ಸಿನಿಮಾದಲ್ಲಿ ಶ್ರೀರಾಮನಿಗೆ ಹಾಗೂ ಹಿಂದೂ ಧರ್ಮಕ್ಕೆ ಧಕ್ಕೆ ಆಗುವಂತಹ ಸನ್ನಿವೇಶಗಳ ಇವೆ ಎನ್ನುವ ಕಾರಣಕ್ಕಾಗಿ ಹಲವಾರು ಜನರು ಆಕ್ರೋಶ ವ್ಯಕ್ತ ಪಡಿಸಿದ್ದರು. ಒಟಿಟಿಯಿಂದ ಚಿತ್ರವನ್ನು ಡಿಲಿಟ್ ಮಾಡಲಾಗಿತ್ತು. ನಂತರ ಚಿತ್ರದ ನಿರ್ದೇಶಕ, ನಿರ್ಮಾಪಕ ಹಾಗೂ ನಟಿ ನಯನತಾರಾ ಅವರ ಮೇಲೂ ಪ್ರಕರಣ ದಾಖಲಾಗಿತ್ತು. ಮಧ್ಯ ಪ್ರದೇಶದ ಜಬಲ್ ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ವಿವಾದ (Controversy) ಭುಗಿಲೇಳುತ್ತಿದ್ದಂತೆಯೇ ‘ಅನ್ನಪೂರ್ಣಿ‘(Annapoorani) ಸಿನಿಮಾವನ್ನು ಕೊನೆಗೂ ನೆಟ್ ಫಿಕ್ಸ್ ತೆಗೆದು ಹಾಕಿದೆ. ಈ ಸಿನಿಮಾ ಬಗ್ಗೆ ಸಾಕಷ್ಟು ಟೀಕೆಗಳು ಕೇಳಿ ಬಂದಿದ್ದವು. ಅಲ್ಲದೇ, ಸಿನಿಮಾ ಬಗ್ಗೆ ದೂರು ಕೂಡ ದಾಖಲಾಗಿತ್ತು. ಹಿಂದೂ ಭಾವನೆಗಳಿಗೆ ಧಕ್ಕೆ ಮಾಡಲಾಗಿದೆ ಎನ್ನುವ ಕಾರಣಕ್ಕಾಗಿ ಚಿತ್ರದ ವಿರುದ್ಧ ಪ್ರತಿಭಟನೆ ಕೂಡ ಮಾಡಲಾಗಿತ್ತು.