ಇದೀಗ ರಾಜ್ಯಾದ್ಯಂತ ಬರಗಾಲ ಇದ್ದು ರೈತರು ಸಂಕಷ್ಠದ ಸ್ಥಿತಿಯಲ್ಲಿದ್ದಾರೆ. ಸರಕಾರ ಬರ ಪರಿಹಾರ ನೀಡಲಿ ಅಂತಾ ಆಗ್ರಹಿಸ್ತಿದ್ದಾರೆ. ಇಷ್ಡೆಲ್ಲಾ ಸಂಕಷ್ಠದ ನಡುವೆಯೂ ಕೂಡಾ ಗದಗ ಜಿಲ್ಲೆಯ ರೋಣ ತಾಲೂಕಿನ ಮಾಡಲಗೇರಿ ಗ್ರಾಮದ ರೈತರು ತಾವು ಬೆಳೆದ ಸುಮಾರು 30 ಟ್ರಾಕ್ಟರ್ ಗಳಷ್ಟು ಜೋಳದ ಮೇವನ್ನ 120 ಕಿ. ಮೀ. ದೂರದ ಹುಬ್ಬಳ್ಳಿಯ ಶ್ರೀ ಸಿಧ್ಧಾರೂಢ ಮಠದ ಗೋವುಗಳಿಗೆ ನೀಡೋ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಅನ್ನದಾತನ ಕೈಗಳು ಯಾವಾಗಲು ಕೊಡುಗೈ ಅನ್ನೋದನ್ನ ಇಲ್ಲಿ ಸಾಬೀತುಪಡಿಸಿದ್ದಾರೆ. ಇಲ್ಲಿನ ರೈತರು ಬರದ ಬವಣೆಯ ನಡುವೆಯೂ ಎಕರೆಗೆ 8 ರಿಂದ 10 ಚೀಲದಷ್ಟು ಜೋಳವನ್ನ ಬೆಳೆದಿದ್ದಾರೆ. ತಾಯಿ ಶ್ರೀ ಬಾದಾಮಿ ಬನಶಂಕರಿಯ ಆಶೀರ್ವಾದವೇ ಇದಕ್ಕೆ ಕಾರಣ ಅಂತಾರೆ. ಜೊತೆಗೆ ಎಷ್ಟೇ ಕಷ್ಟ ಬಂದ್ರೂ ಕೂಡಾ ಈ ರೈತರು ಅದನ್ನ ಬದಿಗೊತ್ತಿ ಪ್ರತಿವರ್ಷ ಶ್ರೀ ಸಿಧ್ಧಾರೂಢರ ಮಠದ ಗೋವುಗಳಿಗೆ ತಾವೇ ಸ್ವಥ ತಮ್ಮ ಸ್ವಂತ ಖರ್ಚಿನಲ್ಲಿ ಮೇವು ತೆಗೆದುಕೊಂಡು ಹೋಗಿ ಬಣವಿ ಒಟ್ಟಿ ಸಿಧ್ಧಾರೂಢರಲ್ಲಿ ಭಕ್ತಿ ಮೇರೀತಾರೆ.