ಬಾಗಲಕೋಟೆ:- ಜೆಎಂಎಫ್ಸಿ ಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ಅಪ್ರಾಪ್ತ ತಮ್ಮನಿಗೆ ಬೈಕ್ ನೀಡಿದ್ದ ತಪ್ಪಿಗೆ ಅಣ್ಣನಿಗೆ ಕೋರ್ಟ್ ಶಿಕ್ಷೆ ವಿಧಿಸಿದೆ. ಬರೋಬ್ಬರಿ 25 ಸಾವಿರ ರೂ. ದಂಡ ವಿಧಿಸಿದೆ.
ಅಪ್ರಾಪ್ತ ಸಹೋದರನಿಗೆ ಬೈಕ್ ಚಲಾಯಿಸಲು ನೀಡಿದ್ದ ತಪ್ಪಿಗೆ ಸಚಿನ್ ರಮೇಶ್ ರಾಠೋಡ್ಗೆ 25 ಸಾವಿರ ರೂ. ದಂಡ ವಿಧಿಸಲಾಗಿದೆ. ಹುಲ್ಯಾಳದಿಂದ ಜಮಖಂಡಿಗೆ ಬರುವಾಗ ಬೈಕ್ ನೀಡಿದ್ದಾನೆ. ಈ ವೇಳೆ ಮಾರ್ಗಮಧ್ಯೆ ವಾಹನ ತಪಾಸಣೆ ವೇಳೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದರು. ಫೆಬ್ರವರಿ 23ರಂದು ಜಮಖಂಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮೋಟಾರು ವಾಹನ ಕಾಯ್ದೆ ಉಲ್ಲಂಘನೆ ಆರೋಪದಡಿ ಕೇಸ್ ದಾಖಲಿಸಲಾಗಿದ್ದು, ಬೈಕ್ ಮಾಲೀಕ ಸಚಿನ್ಗೆ 25,000 ರೂ. ದಂಡ ವಿಧಿಸಿದೆ ಎನ್ನಲಾಗಿದೆ.