ಕನ್ನಡದ ರಣವಿಕ್ರಮ, ಬೈರಾಗಿ(Bhairagi), ಹೊಂಗನಸು ಚಿತ್ರಗಳ ನಾಯಕಿ ಅಂಜಲಿ ಮತ್ತೆ ಸುದ್ದಿಯಲ್ಲಿದ್ದಾರೆ. ಶ್ರೀಲೀಲಾರನ್ನ ಹೋಲಿಕೆ ಮಾಡಿದ್ದಕ್ಕೆ ಅಂಜಲಿ ಗರಂ ಆಗಿದ್ದಾರೆ. ಶ್ರೀಲೀಲಾ (Sreeleela) ವಿಚಾರಕ್ಕೆ ಅಂಜಲಿ ತಿರುಗೇಟು ನೀಡಿದ್ದಾರೆ
ಸೌತ್ ನಟಿ ಅಂಜಲಿ(Anjali) ಅವರು ಹೊಸ ಹೊಸ ಪ್ರಾಜೆಕ್ಟ್ಗಳನ್ನು ಒಪ್ಪುವ ಮೂಲಕ ಟಾಕ್ನಲ್ಲಿದ್ದಾರೆ. ಹೊಸ ಸಿನಿಮಾವೊಂದರ ಪ್ರಚಾರ ಕಾರ್ಯದಲ್ಲಿ ನಟಿ ರಾಂಗ್ ಆಗಿದ್ದಾರೆ. ಶ್ರೀಲೀಲಾ ಮತ್ತು ಅವರ ಸಿನಿಮಾ ಕೆರಿಯರ್ ಸಂಬಂಧಿಸಿದ ಕೆಲ ಪ್ರಶ್ನೆಗಳು ಅಂಜಲಿಗೆ ಕೇಳಲಾಗಿದೆ. ಈ ವೇಳೆ, ನಟಿ ಗರಂ ಆಗಿದ್ದಾರೆ.
ನಾನು ನಿಮ್ಮ ಅಭಿಮಾನಿ, ತೆಲುಗಿನ ಹುಡುಗಿ ಎಂಬ ಕಾರಣಕ್ಕೆ ನಿಮಗೆ ಸರಿಯಾದ ಬ್ರೇಕ್ ಸಿಕ್ಕಿಲ್ಲ ಎಂದು ಎಂದಾದರೂ ಅಂದುಕೊಂಡಿದ್ದೀರಾ? ಎನ್ನುವ ಪ್ರಶ್ನೆ ಎದುರಾಗಿತ್ತು. ಇದಕ್ಕೆ ಕೊಂಚ ಖಾರವಾಗಿಯೇ ಅಂಜಲಿ ಉತ್ತರಿಸಿದ್ದಾರೆ. ನನಗೆ ಬ್ರೇಕ್ ಸಿಗದೇ ಇದ್ದರೆ ನೀವು ಹೇಗೆ ನನಗೆ ಅಭಿಮಾನಿ ಆಗುತ್ತಿದ್ದಿರಿ? ಎಂದು ಪ್ರಶ್ನಿಸಿದ್ದಾರೆ. ತೆಲುಗಿನಲ್ಲಿ ನಾನು ಸಿನಿಮಾಗಳನ್ನು ಮಾಡದೇ ಇರಬಹುದು, ತಮಿಳಿನಲ್ಲೂ ಸಿನಿಮಾ ಮಾಡುತ್ತಿದ್ದೇನೆ ಎಂದರು. ಪತ್ರಕರ್ತೆಯೊಬ್ಬರು ಮಾತು ಮುಂದುವರೆಸಿ ಶ್ರೀಲೀಲಾ (Sreeleela) ರೇಂಜ್ನಲ್ಲಿ ನೀವು ಯಾಕೆ ಯಶಸ್ವಿಯಾಗಲಿಲ್ಲ ಎಂದು ಮತ್ತೆ ಕೇಳಿದ್ದಾರೆ. ಸಿಟ್ಟಾದ ಅಂಜಲಿ, ನಾನು ಈ ನಂಬರ್ ಗೇಮ್ಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ, ನನಗೆ ಇಷ್ಟವಾದ ಪಾತ್ರಗಳನ್ನು ನಾನು ಮಾಡುತ್ತೇನೆ ಎಂದಿದ್ದಾರೆ.