ರನೌಟ್ ಆದ ವಿಚಾರಕ್ಕೆ ಇಬ್ಬರು ಆಟಗಾರರು ಮೈದಾನದಲ್ಲೇ ಬ್ಯಾಟ್ ಹಿಡಿದು ಪರಸ್ಪರ ಫೈಟ್ ಮಾಡಿಕೊಂಡಿರುವ ಘಟನೆಯ ವಿಡಿಯೋ ವೈರಲ್ ಆಗಿದೆ.
@gharkekalesh pic.twitter.com/hgkVcfvSIc
— Arhant Shelby (@Arhantt_pvt) November 11, 2023
ಇಲ್ಲೊಂದು ಕ್ರಿಕೆಟ್ ಪಂದ್ಯದಲ್ಲಿ ಇಬ್ಬರು ಬ್ಯಾಟರ್ ಗಳು ಕ್ರಿಸ್ ನಲ್ಲಿರುವಾಗ ರನ್ ಓಡುವ ಭರದಲ್ಲಿ ಒಬ್ಬರು ಔಟ್ ಆಗಿದ್ದಾರೆ. ತನ್ನನ್ನು ಔಟ್ ಮಾಡಿದ್ದಕ್ಕೆ ಬ್ಯಾಟರ್ ಸಹ ಆಟಗಾರರನ ಜೊತೆ ವಾಗ್ವಾದಕ್ಕಿಳಿದಿದ್ದಾನೆ. ಮಾತಿಗೆ ಮಾತು ಬೆಳೆದು ಇಬ್ಬರು ಹೊಡೆದಾಡಿಕೊಳ್ಳಲು ಮುಂದಾಗಿದ್ದಾರೆ. ಪರಸ್ಪರ ಬ್ಯಾಟ್ ನಿಂದ ಹೊಡೆದಾಡಿಕೊಂಡಿದ್ದಾರೆ. ಪರಿಸ್ಥಿತಿ ಅರಿತ ಇತರ ಆಟಗಾರರು ಇಬ್ಬರನ್ನು ಎಳೆದುಕೊಂಡು ಹೋಗಿದ್ದಾರೆ.
ಈ ಘಟನೆ ಎಲ್ಲಿ ನಡೆದಿದೆ ಎನ್ನುವುದರ ಸ್ಪಷ್ಟ ಮಾಹಿತಿ ಇಲ್ಲ. ಸೋಶಿಯಲ್ ಮೀಡಿಯಾದಲ್ಲಿ ಈ ಕ್ರಿಕೆಟ್ ಜಗಳದ ವಿಡಿಯೋ ವೈರಲ್ ಆಗಿದೆ.