ಬೆಳಗಾವಿ:- ಅಂಗನವಾಡಿ ಸಹಾಯಕಿಗೆ ಥಳಿಸಿ ಕುಡಗೋಲಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪಿಯನ್ನು ಅರೆಸ್ಟ್ ಮಾಡಲಾಗಿದೆ.
ಬೆಳಗಾವಿ ತಾಲೂಕಿನ ಬಸುರ್ತೆ ಗ್ರಾಮದ ಸರ್ಕಾರಿ ಅರಣ್ಯದಲ್ಲಿ ಕಾಕತಿ ಪೊಲೀಸರಿಂದ ಆರೋಪಿಯನ್ನು ಬಂಧಿಸಲಾಗಿದ್ದು, 48 ವರ್ಷದ ಕಲ್ಲಪ್ಪ @ ಕಲ್ಯಾಣಿ ಮೋರೆ ಬಂಧಿತ ಆರೋಪಿ ಎನ್ನಲಾಗಿದೆ.
ಸುಗಂಧಾ ಮೋರೆ (50) ಸಾವು ಬದುಕಿನ ಮಧ್ಯೆ ನರಳಾಡುತ್ತಿರುವ ಮಹಿಳೆ ಎನ್ನಲಾಗಿದೆ.
ಮಕ್ಕಳು ಅಂದ್ರೆ ತುಂಟಾಟ ಮಾಡೋದು. ತರಲೆ ಮಾಡೋದು ಸಹಜ. ಹಾಗಂತ ಮಕ್ಕಳು ದೊಡ್ಡ ತಪ್ಪೇನು ಮಾಡಿರಲಿಲ್ಲ. ಮನೆ ಮುಂದೆ ಇದ್ದ ಮಲ್ಲಿಗೆ ಹೂವನ್ನು ಕಿತ್ತು ಹಾಕಿದ್ರು. ಅಷ್ಟಕ್ಕೆ ಈ ವ್ಯಕ್ತಿ ಅಂಗನವಾಡಿ ಸಹಾಯಕಿ ಜೊತೆ ಜಗಳ ಮಾಡಿದ್ದಾನೆ. ಕೊನೆಗೆ ಮನೆಯಲ್ಲಿದ್ದ ಕುಡುಗೋಲಿನಿಂದ ಮಹಿಳೆ ಮೂಗಿಗೆ ಹೊಡೆದು ಬಿಟ್ಟಿದ್ದಾನೆ. ಕುಡುಗೋಲಿನಿಂದ ಬಿದ್ದ ಏಟಿಗೆ ಮಹಿಳೆ ಮೂಗು ಕಟ್ ಆಗಿ ರಕ್ತಸ್ರಾವವಾಗಿದೆ. ಪಾಪಿ ಅಟ್ಟಹಾಸಕ್ಕೆ ಇದೀಗ ಬಡಪಾಯಿ ಅಂಗನವಾಡಿ ಸಹಾಯಕಿ ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಟ ನಡೆಸ್ತಿದ್ದಾಳೆ.
ಜ.1ರಂದು ಅಂಗನವಾಡಿ ಕೇಂದ್ರದ ಮುಂದೆ ಈ ಘಟನೆ ನಡೆದಿತ್ತು. ದಿನೇ ದಿನೇ ಹೆಚ್ಚುತ್ತಿರುವ ರಾಕ್ಷಸಿ ವರ್ತನೆ ಕಂಡು ಬೆಳಗಾವಿ ಜನ ಬೆಚ್ಚಿ ಬಿದ್ದಿದ್ದಾರೆ.
ಮೂಗ ಗಂಡನನೊಂದಿಗೆ ಅಂಗನವಾಡಿ ಸಹಾಯಕಿಯಾಗಿ ಜೀವನ ಕಟ್ಟಿಕೊಳ್ತಿದ್ದ ಮಹಿಳೆ, ಸದ್ಯ ಬೆಳಗಾವಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತು ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಆರೋಪಿ ಬಂಧಿಸಿ ತನಿಖೆಗೆ ಒಳಪಡಿಸಲಾಗಿದೆ.