ಬೆಂಗಳೂರು: ಮುಖ್ಯಮಂತ್ರಿಯಾಗಿ ರಾಜ್ಯಕ್ಕೆ ಹೆಚ್ ಡಿಕುಮಾರಸ್ವಾಮಿ ಯಾವ ಯೋಜನೆ ಕೊಟ್ಟಿದ್ದಾರೆ ಎಂಬ ಡಿಸಿಎಂ ಡಿಕೆಶಿವಕುಮಾರ್ ಹೇಳಿಕೆಗೆ ಜೆಡಿಎಸ್ ತಿರುಗೇಟು ನೀಡಿದೆ. ಎಕ್ಸ್ ಖಾತೆಯಲ್ಲಿ ಪೋಸ್ಟ್ ಮೂಲಕ ಡಿಕೆಶಿಗೆ ದಳಪತಿಗಳು ಉತ್ತರ ನೀಡಿದ್ದಾರೆ. ಹೆಚ್ ಡಿ ಕುಮಾರಸ್ವಾಮಿ ಅವರ ಅಧಿಕಾರದ ಅವಧಿಯಲ್ಲಿ ಬಂದಂತಹ ಯೋಜನೆಗಳ ಪಟ್ಟಿ ಹಾಕಿ ಡಿಕೆಶಿ ವಿರುದ್ಧ ಕಿಡಿಕಾರಿದ್ದಾರೆ.
Winter Tips: ಚಳಿಗಾಲದಲ್ಲಿ ವಾಕಿಂಗ್ ಮಾಡುವುದರಿಂದ ಆಗುವ ಪ್ರಯೋಜನಗಳೇನು ಗೊತ್ತಾ..?
ಜೆಡಿಎಸ್ ಟ್ವೀಟ್ ನಲ್ಲೇನಿದೆ..?
ತಮ್ಮ ಎಕ್ಸ್ ಖಾತೆಯಲ್ಲಿ ಮಿಸ್ಟರ್ ಡಿಕೆಶಿವಕುಮಾರ್, ಹೆಚ್ ಡಿ ಕುಮಾರಸ್ವಾಮಿ ಅವರು ಎರಡು ಬಾರಿ ಮುಖ್ಯಮಂತ್ರಿಗಳಾಗಿ ರಾಜ್ಯಕ್ಕೆ ನೀಡಿರುವ ಕೊಡುಗೆಗಳು ಇವು. ಅಲ್ಪಾವಧಿಯಲ್ಲೇ ಅವರು ಮಾಡಿರುವ ಜನಪರ ಯೋಜನೆಗಳು ನಾಡಿನ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯುವಂತಹ ಯೋಜನೆಗಳಾಗಿ ಮೆಚ್ಚುಗೆ ಪಡೆದಿವೆ. ಆದರೆ ನೀವು ಕನಕಪುರದಲ್ಲಿ ಕಲ್ಲು ಬಂಡೆಗಳನ್ನು ಕರಗಿಸಿ, ನಿಮ್ಮ ಕುಟುಂಬದವರ ಹೆಸರಲ್ಲಿ ಅಕ್ರಮವಾಗಿ ಸಾವಿರಾರು ಕೋಟಿಗೆ ಆಸ್ತಿಯನ್ನು ರಾಕೆಟ್ ವೇಗದಲ್ಲಿ ಏರಿಕೆ ಮಾಡಿಕೊಂಡಿರುವುದೇ ಇದುವರೆಗಿನ ನಿಮ್ಮ ಸಾಧನೆ. ಎಸ್.ಎಂ.ಕೃಷ್ಣ ಅವರ ಕಾಲದಲ್ಲಿ ಮಂತ್ರಿಯಾದಾಗ ನಿಮ್ಮ ಆಸ್ತಿ ಎಷ್ಟಿತ್ತು ? ಈಗ ಸಾವಿರಾರು ಕೋಟಿ ಜಾಸ್ತಿಯಾಗಿದೆ. ಅದರ ಬಗ್ಗೆ ಬಹಿರಂಗಪಡಿಸಿ ..? ಮೈಕ್ ಮುಂದೆ ಶೋ ಆಫ್ ಭಾಷಣಗಳನ್ನು ಬಿಟ್ಟು ರಾಜ್ಯಕ್ಕೆ ಮತ್ತು ಜನರಿಗೆ ನಿಮ್ಮ ಕೊಡುಗೆ ಏನು ಜನತೆಗೆ ತಿಳಿಸಿ ಡಿಕೆಶಿ ? “ಅಂಗೈ ಹುಣ್ಣಿಗೆ ಕನ್ನಡಿ ಬೇಕೇ”.. ಎಂದು ಪ್ರಶ್ನಿಸಿದ್ದಾರೆ. ಬೆಂಗಳೂರು ಉಸ್ತುವಾರಿಗಳೇ, ಮೊದಲು ಬೆಂಗಳೂರಿನ ರಸ್ತೆ ಗುಂಡಿಗಳಿಗೆ ತೇಪೆಯನ್ನಾದರೂ ಸರಿಯಾಗಿ ಹಾಕಿಸಿ. ಬಿಟ್ಟಿ ಬಿಲ್ಡಪ್ ಬಿಡಿ. ಕಲೆಕ್ಷನ್, ಪರ್ಸಂಟೇಜ್ ಗಿರಾಕಿ ಬಗ್ಗೆ ಪ್ರತಿ ದಿನ ಕೆಪಿಸಿಸಿ ಕಚೇರಿಯಲ್ಲೇ ಚರ್ಚೆ ನಡೆಯುತ್ತೆ. ಪರ್ಸಂಟೇಜ್ ಕಾಮಗಾರಿ ಮಿನಿಸ್ಟರ್ ಎಂದು ಪೋಸ್ಟ್ ಮಾಡಿದ್ದಾರೆ.