ಆನೇಕಲ್: ತಾಲ್ಲೂಕಿನ ದಾಸನಪುರದ ದಲಿತ ಯುವಕ ಸುರೇಶ್ ಅವರ ಕೊಲೆ ಪ್ರಕರಣವನ್ನು ಭೇದಿಸಲು ಪೊಲೀಸರು ವಿಫಲರಾಗಿದ್ದು, ಈ ಪ್ರಕರಣದ ತನಿಖೆಯನ್ನು CIDಗೆ ವಹಿಸಬೇಕು ಎಂದು ಆಗ್ರಹಿಸಿ ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ತಾಲ್ಲೂಕು ಕಚೇರಿ ಮುಂಭಾಗದ ಡಾ. ಉದಯ್ ಕುಮಾರ್ ವೃತ್ತದಲ್ಲಿ ಅಹೋರಾತ್ರಿ ಧರಣಿ ಹಮ್ಮಿಕೊಳ್ಳಲಾಯಿತು.
ಪ್ರಗತಿಪರ ಒಕ್ಕೂಟದ ಅಧ್ಯಕ್ಷ ರಾವಣ ಮಾತನಾಡಿ ದಾಸನಪುರದ ಯುವಕ ಸುರೇಶ್ ಕೊಲೆಯಾಗಿ ನಾಲ್ಕು ವರ್ಷ ಕಳೆದರೂ, ಈ ಕೃತ್ಯವೆಸಗಿದವರನ್ನು ಪತ್ತೆ ಹಚ್ಚಲಾಗಲಿಲ್ಲ. ಈ ಪ್ರಕರಣದ ತನಿಖೆಗೆ ಚುರುಕು ನೀಡುವ ಅಗತ್ಯವಿದ್ದು, ಇದನ್ನು CID ತನಿಖೆಗೆ ವರ್ಗಾಯಿಸಬೇಕು ಎಂದು ಒತ್ತಾಯಿಸಿದರು.
ಕೊಲೆ ಪ್ರಕರಣದ ತನಿಖೆ ವಿಚಾರದಲ್ಲಿ ಪೊಲೀಸರು ನಿರ್ಲಕ್ಷ್ಯ ವಹಿಸಿದ್ದಾರೆ. ಈ ಕೊಲೆ ಪ್ರಕರಣವನ್ನು ಪೊಲೀಸರು ಅಪಘಾತ ಎನ್ನುತ್ತಿದ್ದಾರೆ. ಆದರೆ, ಕೊಲೆಯಾದ ಸುರೇಶ್ ಅವರ ಬೆನ್ನು ಮತ್ತು ಕತ್ತಿನ ಭಾಗದಲ್ಲಿ ಗಾಯದ ಗುರುತುಗಳಿವೆ. ಈ ಘಟನೆ ಸಂಭವಿಸಿ ನಾಲ್ಕು ವರ್ಷಗಳಾದರೂ ಪೊಲೀಸರು
ಈವರೆಗೆ ಚಾರ್ಜ್ ಶೀಟ್ ದಾಖಲಿಸಿಲ್ಲ. ಹೀಗಾಗಿ, ಪೊಲೀಸರ ಮೇಲೆ ನಂಬಿಕೆಯೇ ಇಲ್ಲ. ಜೊತೆಗೆ ಪೊಲೀಸರ ಮೇಲೆ ಅನುಮಾನ ವ್ಯಕ್ತವಾಗುತ್ತಿದೆ. ಆರೋಪಿಗಳ ಪತ್ತೆಗೆ ಒತ್ತಾಯಿಸಿ ಗೃಹ ಸಚಿವರಿಗೆ ಮನವಿ ಸಲ್ಲಿಸಲಾಗಿದೆ. ದಲಿತ ಮತ್ತು ಕುಂದುಕೊರತೆಗಳ ಸಭೆಯಲ್ಲೂ ಈ ಬಗ್ಗೆ ಧ್ವನಿ ಎತ್ತಲಾಗಿದೆ. ಈ ಕೊಲೆ ಪ್ರಕರಣದ ಅಪರಾಧಿಗಳನ್ನು ಬಂಧನಕ್ಕೆ ಒತ್ತಾಯಿಸಿ ಅಹೋರಾತ್ರಿ ಧರಣಿ ಹಮ್ಮಿ-ಕೊಳ್ಳಲಾಗಿದೆ ಎಂದರು.
ಇನ್ನು ಈ ಬಗ್ಗೆ ಹಿರಿಯ ಹೋರಾಟಗಾರ ಸುರೇಶ್ ಮಾತನಾಡಿಈ ಕೊಲೆ ಪ್ರಕರಣದಲ್ಲಿ ಪೊಲೀಸರು ನ್ಯಾಯದ ಪರವಾಗಿ ನಿಲ್ಲಬೇಕಿದೆ. ಆದರೆ, ಘಟನೆ ಸಂಭವಿಸಿ ನಾಲ್ಕು ವರ್ಷ ಕಳೆದರೂ, ತನಿಖೆಯಲ್ಲಿಯಾವುದೇ ಬೆಳವಣಿಗೆ ಕಂಡುಬಂದಿಲ್ಲ. ಶ್ರೀಮಂತರ ಪರವಾಗಿ ಪೊಲೀಸರು ಕೆಲಸ ಮಾಡುತ್ತಿದ್ದಾರೆ. ಬಡವರಿಗೆ ನ್ಯಾಯ ಒದಗಿಸುವ ಕೆಲಸ ಮಾಡಬೇಕು ಎಂದು ತಿಳಿಸಿದರು ಇನ್ನು ಆಹೋರಾತ್ರಿ ಧರಣಿಯಲ್ಲಿ
ವಕೀಲ ಆನಂದ ಚಕ್ರವರ್ತಿ, ಸಿಪಿಐಎಂ ಮುಖಂಡ ಡಿ.ಮಹದೇಶ್, ಭಾರತೀಯ ಭೀಮ ಸೇನೆಯ ರಾಜ್ಯ ಘಟಕದ ಅಧ್ಯಕ್ಷ ಬ್ಯಾಟರಾಜು, ಚಿಕ್ಕಹಾಗಡೆ ವೆಂಕಟೇಶ್ ಮೂರ್ತಿ, ಸಿಪಿಎಂ ಮಾದೇಶ್ ಪ್ರಗತಿಪರ ಒಕ್ಕೂಟದ ಅಧ್ಯಕ್ಷ ರಾವಣ ತ್ಯಾವಕನನಹಳ್ಳಿ ಶಂಕರ್ , ಗೋವಿಂದ ಮೌರ್ಯ ತ್ರಿಪುರ ಸುಂದರಿ ಹಾಗೂ ಸುರೇಶನ ಕುಟುಂಬಸ್ಥರು ಭಾಗಿಯಾಗಿದ್ದರು..