ಅಮರಾವತಿ :- ದೇಶದೆಲ್ಲೆಡೆ ಭಾರೀ ಸಂಚಲನ ಮೂಡಿಸಿದ್ದ ವಕ್ಫ್ ಮಂಡಳಿಯನ್ನೇ ಆಂಧ್ರಪ್ರದೇಶ ವಜಾ ಮಾಡಿದೆ.
ಆಂಧ್ರಪ್ರದೇಶ ರಾಜ್ಯ ವಕ್ಫ್ ಮಂಡಳಿಯನ್ನು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ನೇತೃತ್ವದ ಸರ್ಕಾರ ವಿಸರ್ಜಿಸಿದೆ.
ಹಿಂದಿನ ವೈಎಸ್ಆರ್ ಕಾಂಗ್ರೆಸ್ ಆಡಳಿತದಿಂದ ನಾಮನಿರ್ದೇಶನಗೊಂಡ ರಾಜ್ಯ ವಕ್ಫ್ ಮಂಡಳಿಯನ್ನು ವಿಸರ್ಜಿಸಲಾಗಿದೆ. ವಕ್ಫ್ ಮಸೂದೆ, 2024ರ ವಿರುದ್ಧ ನಡೆಯುತ್ತಿರುವ ಕೋಲಾಹಲದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ನ.30 ರ ದಿನಾಂಕದ ಆದೇಶದಲ್ಲಿ, ವೈಎಸ್ಆರ್ಸಿ ಆಡಳಿತದಿಂದ ರಚಿಸಲ್ಪಟ್ಟ ರಾಜ್ಯ ವಕ್ಫ್ ಬೋರ್ಡ್ ದೀರ್ಘಕಾಲದ ವರೆಗೆ ಕಾರ್ಯನಿರ್ವಹಿಸುತ್ತಿಲ್ಲ ಎಂದು ರಾಜ್ಯ ಸರ್ಕಾರವು ಗಮನಿಸಿದೆ.