ಬೆಂಗಳೂರು:- ಬಾಂಗ್ಲಾ ವಾಸಿಗಳಿಗೆ ಅಕ್ರಮ ಆಧಾರ್ ಕಾರ್ಡ್ ಮಾಡಿಕೊಡುತ್ತಿದ್ದ ಆರೋಪಿಯನ್ನು ಅಂದರ್ ಮಾಡಲಾಗಿದೆ. ಸೂರ್ಯಸಿಟಿ ಠಾಣೆ ಪೊಲೀಸರಿಂದ ಆರೋಪಿ ಅರೆಸ್ಟ್ ಮಾಡಲಾಗಿದೆ.
ಬಂಧಿತ ಆರೋಪಿಯನ್ನು ಪಶ್ಚಿಮ ಬಂಗಾಳದವನಾದ ಅರ್ನಾಬ್ ಮಂಡಲ್ ಎಂದು ಗುರುತಿಸಲಾಗಿದೆ. ಈತ ಬೆಂಗಳೂರು ಹೊರವಲಯದ ಸೂರ್ಯಸಿಟಿ ಬಳಿ ಸೈಬರ್ ಸೆಂಟರ್ ತೆರೆದಿದ್ದನು.
ಬೆಂಗಳೂರಿನಲ್ಲಿ ನಡೆಯಲಿದೆ WPL ಮಿನಿ ಹರಾಜು! ದಿನಾಂಕ, ತಂಡಗಳ ವಿವರ ಇಲ್ಲಿದೆ!
ಆರೋಪಿ ಅರ್ನಾಬ್ ಮಂಡಲ್ ಸೈಬರ್ ಸೆಂಟರ್ನಲ್ಲಿ ನಡೆಯುತ್ತಿರುವ ಅಕ್ರಮ ದಂಧೆ ಬಗ್ಗೆ ತಿಳಿದಿದೆ. ಖಚಿತ ಮಾಹಿತಿ ಪಡೆದುಕೊಂಡ ಪೊಲೀಸರು ಗುರುವಾರ ಸೈಬರ್ ಸೆಂಟರ್ ಮೇಲೆ ದಾಳಿ ಮಾಡಿದ್ದಾರೆ. ದಾಳಿ ವೇಳೆ ಸಾಕಷ್ಟು ನಕಲಿ ಆಧಾರ್ ಕಾರ್ಡ್ ಪತ್ತೆಯಾಗಿವೆ. ಹಾಗೆಯೇ 18 ಮನೆಗಳ ಬಾಡಿಗೆ ಅಗ್ರಿಮೆಂಟ್ ಪತ್ತೆಯಾಗಿವೆ.
ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದಾಗ ಅರ್ನಾಬ್ ಮಂಡಲ್ 8 ಸಾವಿರ ರೂ.ಗೆ ನಕಲಿ ಗುರುತಿನ ಚೀಟಿಗಳನ್ನು ಮಾಡಿಕೊಡುತ್ತಿರುವುದಾಗಿ ಬಾಯಿಬಿಟ್ಟಿದ್ದಾನೆ.
ಈ ಬಗ್ಗೆ ಬೆಂಗಳೂರು ಗ್ರಾಮಾಂತರ ಎಸ್ಪಿ ಸಿ.ಕೆ.ಬಾಬಾ ಮಾತನಾಡಿ, ಬಾಂಗ್ಲಾ ಪ್ರಜೆಗಳಿಗೆ ಭಾರತದ ನಕಲಿ ಆಧಾರ್, ಐಡಿ ಕಾರ್ಡ್ ಮಾಡಿಕೊಡ್ತಿದ್ದನು. ಕಳೆದ ಒಂದು ವರ್ಷದಿಂದ ಇದೇ ರೀತಿ ನಕಲಿ ದಾಖಲೆ ಸೃಷ್ಟಿಸಿ ಕೊಡುತ್ತಿದ್ದನು. ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ ಆರೋಪಿಯನ್ನು ಬಂಧಿಸಲಾಗಿದೆ. ಪೊಲೀಸರ ದಾಳಿ ವೇಳೆ ನಕಲಿ ದಾಖಲಾತಿಗಳನ್ನು ಜಪ್ತಿ ಮಾಡಲಾಗಿದೆ ಎಂದು ತಿಳಿಸಿದರು.