ಬಾಗಲಕೋಟೆ:- ಬಾಗಲಕೋಟೆ ಗ್ರಾಮೀಣ ಠಾಣೆಯ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಬ್ಯಾಂಕ್ ದರೋಡೆಗೆ ಯತ್ನಿಸಿ ಅರ್ಧದಲ್ಲೇ ಪರಾರಿಯಾಗಿದ್ದ ದರೋಡೆಕೋರರನ್ನು ಅರೆಸ್ಟ್ ಮಾಡಿದ್ದಾರೆ.
ಜಾಮೀನು ಸಿಕ್ಕರೂ ರಾತ್ರಿ ಪೂರ್ತಿ ಜೈಲಿನಲ್ಲೇ ಕಳೆದ ಅಲ್ಲು ಅರ್ಜುನ್: ಮುಂಜಾನೆಯೇ ಬಿಡುಗಡೆ
ಬಾಗಲಕೋಟೆ ತಾಲೂಕಿನ ರಾಂಪುರ ಗ್ರಾಮದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ನಲ್ಲಿ ನವೆಂಬರ್ ನ. 25ರ ರಾತ್ರಿ, ದರೋಡೆಗೆ ತಂಡವೊಂದು ಸ್ಕೆಚ್ ಹಾಕಿತ್ತು. ಬೀಗ ಮುರಿದು ಒಳಗೆ ನುಗ್ಗಿದ್ದ ಗ್ಯಾಂಗ್ ಸೈರನ್ ಬಂದ್ ಮಾಡಿ, ನಂತರ ಸಿಸಿ ಕ್ಯಾಮೆರಾ ಒಡೆದು, ಅಡುಗೆ ಅನಿಲ ಸಿಲಿಂಡರ್, ಗ್ಯಾಸ್ ಕಟ್ಟರ್ ಗನ್ನಿಂದ ಬರೋಬ್ಬರಿ ಒಂದೂವರೆ ತಾಸು ಸ್ಟ್ರಾಂಗ್ ರೂಮ್ ಒಡೆಯಲು ವಿಫಲ ಯತ್ನ ನಡೆಸಿತ್ತು. ಆದರೆ ಅದು ಸಾಧ್ಯವಾಗದೇ ಇದ್ದಾಗ ಅಷ್ಟಕ್ಕೆ ಬಿಟ್ಟು ಪರಾರಿಯಾಗಿದ್ದರು.
ಕಳ್ಳತನಕ್ಕೆ ವಿಫಲ ಯತ್ನ ನಡೆದ ನಂತರ ಬಾಗಲಕೋಟೆ ಗ್ರಾಮೀಣ ಠಾಣೆ ಪೊಲೀಸರು ಎಫ್ಐಆರ್ ದಾಖಲಿಸಿ ತನಿಖೆ ಆರಭಿಸಿದ್ದರು. ಒಂದು ಸಿಸಿಟಿವಿ ಒಡೆಯದ ಕಾರಣ ಆ ಕ್ಯಾಮೆರಾದಲ್ಲಿ ಸೆರೆಯಾದ ಕಳ್ಳತನದ ದೃಶ್ಯವನ್ನು ಆಧಾರಿಸಿ ತನಿಖೆ ಚುರುಕುಗೊಳಿಸಿದ್ದರು.
ಇದೀಗ ಆರೋಪಿಗಳು ಕಂಬಿ ಎಣಿಸುತ್ತಿದ್ದಾರೆ.