ವಿಜಯಪುರ:- ಬೈಕ್, ಮನೆಗಳ್ಳತನ ಮಾಡುತ್ತಿದ್ದ ಇಬ್ಬರನ್ನು ಅರೆಸ್ಟ್ ಮಾಡುವಲ್ಲಿ ವಿಜಯಪುರ ಪೊಲೀಸರು ಯಶಸ್ವಿಯಾಗಿದ್ದಾರೆ.
ಚನ್ನಪಟ್ಟಣ ಕ್ಷೇತ್ರದಿಂದ ಸ್ಪರ್ಧೆ ಖಚಿತ: ಸಿಪಿ ಯೋಗೇಶ್ವರ್ ಸ್ಪಷ್ಟನೆ!
ಬಂಧಿತರನ್ನು ಸಮೀರ ಇನಾಮದಾರ ಹಾಗೂ ಮೊಸೀನ ಕಲಾದಗಿ ಎಂದು ಗುರುತಿಸಲಾಗಿದೆ. ನಗರದ ಸಿಂದಗಿ ನಾಕಾ ಬಳಿ ಮನೆಗಳ್ಳತನ ಮಾಡಿ, ಓಡಾಡುತ್ತಿದ್ದ ವೇಳೆ ಪರಿಶೀಲನೆ ಮಾಡುತ್ತಿದ್ದ ಪೊಲೀಸರು ಓರ್ವನನ್ನು ಬಂಧಿಸಿದ್ದು, ಮತ್ತೊಂದೆಡೆ ಬೈಕ್ ಕಳ್ಳತನ ಮಾಡುತ್ತಿದ್ದ ವೇಳೆ ಓರ್ವನನ್ನು ಬಂಧಿಸಿದ್ದಾರೆ.
ಮನೆಗಳ್ಳತನ ಮಾಡುತ್ತಿದ್ದ ಆರೋಪಿಯಿಂದ 7,59,600 ಲಕ್ಷ ರೂ. ಮೌಲ್ಯದ 100 ಗ್ರಾಂ ಚಿನ್ನ, 120 ಗ್ರಾಂ ಬೆಳ್ಳಿ ವಶಕ್ಕೆ ಪಡೆಯಲಾಗಿದೆ. ಇನ್ನೂ ಬೈಕ್ ಕಳ್ಳತನ ಮಾಡುತ್ತಿದ್ದ ಆರೋಪಿಯಿಂದ 2,20,000 ಲಕ್ಷ ರೂ. ಮೌಲ್ಯದ 4 ವಿವಿಧ ಕಂಪನಿಯ ಬೈಕ್ಗಳನ್ನು ವಶಕ್ಕೆ ಪಡೆಯಲಾಗಿದೆ.