ಬೆಂಗಳೂರು: ನಾವು ಕೂಡಾ ಸೋಮಣ್ಣಗೆ ಸಂಪೂರ್ಣ ಬೆಂಬಲಿಸ್ತೇವೆ. ಅವರು ಹೈಕಮಾಂಡ್ ಎದುರು ಏನು ಅಪೇಕ್ಷೆ ಇಟ್ಟಿದ್ದಾರೋ ಅದರ ಬಗ್ಗೆಯೂ ಹೈಕಮಾಂಡ್ ಜೊತೆ ಚರ್ಚೆ ಮಾಡುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದರು. ಬೆಂಗಳೂರಿನಲ್ಲಿ ಗೋಡೆ ಬರಹ ಅಭಿಯಾನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಚಾಲನೆ ಕೊಟ್ಟರು. ಬಳಿಕ ಸಂಸದರ ವಿವಾದಾತ್ಮಕ ಹೇಳಿಕೆಗಳ ವಿಚಾರಕ್ಕೆ ಪ್ರತಿಕ್ರಿಯಿಸಿ,
ಮೊದಲೇ ರಾಜಕಾರಣಿಗಳು ಅಂದ್ರೆ ಜನ ನಂಬಲ್ಲ, ಅಂಥ ಪರಿಸ್ಥಿತಿ ಇದೆ. ಯಾರೇ ಇದ್ದರೂ ನಮ್ಮ ಹೇಳಿಕೆ ಗಂಭೀರವಾಗಿರಬೇಕು. ಸಮಾಜ ಒಪ್ಪುವಂತೆ ಮಾತು ಇರಬೇಕು. ಅನಂತ್ ಕುಮಾರ್ ಹೆಗ್ಡೆ ಹೇಳಿಕೆಗಳನ್ನು ನಾನೂ ಗಮನಿಸಿದ್ದೇನೆ ಎಂದರು. ನಾನು ಅವರ ಜೊತೆಗೂ ಇದರ ಬಗ್ಗೆ ಮಾತಾಡುತ್ತೇನೆ.
Killing a child: ನೇಲ್ ಪಾಲಿಶ್ ರಿಮೂವರ್ ಕುಡಿಸಿ ಮಗುವಿನ ಹತ್ಯೆ: ಮಹಿಳೆ ಅರೆಸ್ಟ್!
ಅನಂತ್ ಕುಮಾರ್ ಹೇಳಿಕೆಗೂ ಪಕ್ಷಕ್ಕೂ ಸಂಬಂಧ ಇಲ್ಲ. ಅವರು ಹೇಳಿರೋದೆಲ್ಲ ಅವರ ವೈಯಕ್ತಿಕ ಅಭಿಪ್ರಾಯಗಳು. ಇದರ ಬಗ್ಗೆ ಅವರ ಜೊತೆ ವೈಯಕ್ತಿಕವಾಗಿ ಮಾತಾಡುತ್ತೇನೆ. ನಾವು ಕೂಡಾ ಸೋಮಣ್ಣಗೆ ಸಂಪೂರ್ಣ ಬೆಂಬಲಿಸ್ತೇವೆ. ಅವರು ಹೈಕಮಾಂಡ್ ಎದುರು ಏನು ಅಪೇಕ್ಷೆ ಇಟ್ಟಿದ್ದಾರೋ ಅದರ ಬಗ್ಗೆಯೂ ಹೈಕಮಾಂಡ್ ಜೊತೆ ಚರ್ಚೆ ಮಾಡುವುದಾಗಿ ಹೇಳಿದ್ದರು