ಧಾರವಾಡ : ಹಾಡು ಹಗಲೇ ಮನೆಗೆ ನುಗ್ಗಿ ಕಳ್ಳತನ ಮಾಡಿರುವ ಘಟನೆ ನಡೆದಿದೆ. ಧಾರವಾಡ ನಗರದ ಮಾಳಮಡ್ಡಿ ಬಡಾವಣೆಯ ಕಬ್ಬೂರ ರಸ್ತೆಯಲ್ಲಿ ನಡೆದಿದೆ. ಮಟ ಮಟ ಮಧ್ಯಾಹ್ನವೇ ಡಾ. ಆನಂದ ಕಬ್ಬೂರ ಎಂಬುವವರ ಮನೆಗೆ ನುಗ್ಗಿ ಕಳ್ಳತನ ಮಾಡಿದ್ದಾರೆ.
ಮನೆಯಲ್ಲಿ ಆನಂದ್ ಅವರ ಪತ್ನಿ ವಿನೋದಿನಿ ಒಬ್ಬರೇ ಇದ್ದರು. ಈ ವೇಳೆ ನೇರವಾಗಿ ಬಂದು ಬಾಗಿಲು ಬಡಿದಿರೋ ಇಬ್ಬರು, ಏಕಾಏಕಿ ಒಳಗೆ ಬಂದಿದ್ದಾರೆ. ಬಾಗಿಲು ತಳ್ಳಿ ಒಳ ನುಗ್ಗಿ ಹಲ್ಲೆಮಾಡಿ, ಮಾಂಗಲ್ಯ ಕಿತ್ತುಕೊಂಡಿದ್ದಾರೆ. ಮಾಂಗಲ್ಯ ಮತ್ತು ಅಂದಾಜು 25 ಸಾವಿರ ನಗದು ದೋಚಿದ್ದು, ಮನೆಯ ಸಿಸಿ ಕ್ಯಾಮರಾ ಡಿವಿಆರ್ ಸಹ ಕದ್ದಿದ್ದಾರೆ. ಹಲ್ಲೆಯಿಂದ ತೀವ್ರ ಗಾಯಗೊಂಡಿರುವ ವಿನೋದಿನಿ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನಾ ಸ್ಥಳಕ್ಕೆ ಡಿಸಿಪಿಗಳಾದ ಮಹಾಲಿಂಗ ನಂದಗಾವಿ, ರವೀಶ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಿದ್ಯಾಗಿರಿ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.