ಇನ್ಸ್ಟಾಗ್ರಾಂನಲ್ಲಿ ಬರೋಬ್ಬರಿ 4 ಮಿಲಿಯನ್ಗೂ ಅಧಿಕ ಫಾಲೋವರ್ಸ್ ಹೊಂದಿರುವ ಅಮಲಾ, ಕೇವಲ ರೀಲ್ಸ್ನಿಂದ ಮಾತ್ರವಲ್ಲ ಸಿನಿಮಾ ಪ್ರಚಾರಗಳನ್ನು ಮಾಡುವ ಮೂಲಕ ಹಣ ಸಂಪಾದನೆ ಮಾಡುತ್ತಾರೆ.
ಕೇರಳದ ತ್ರಿವೆಂಡ್ರಮ್ ಮೂಲದ ಅಮಲಾ ಅವರು ಅನೇಕ ಬಾರಿ ಸಿನಿಮಾ ವೇದಿಕೆಗಳಲ್ಲೂ ಕಾಣಿಸಿಕೊಂಡಿದ್ದಾರೆ. ಜಾಲತಾಣದಲ್ಲಿ ಆಕೆಯ ಖ್ಯಾತಿ ಸೆಲೆಬ್ರಿಟಿ ಪಟ್ಟವನ್ನು ತಂದುಕೊಟ್ಟಿದೆ. ಆದರೆ, ಇದೀಗ ಅವರ ವಿರುದ್ಧ ಗಂಭೀರ ಆರೋಪವೊಂದು ಕೇಳಿಬಂದಿದೆ.
ಅಮಲಾ ಶಾಜಿ ಅವರ ಪ್ರಮೋಷನ್ ನೋಡಿ ಹಣ ಹೂಡಿಕೆ ಮಾಡಿ, ಹಣ ಕಳೆದುಕೊಂಡ ಯುವಕನೊಬ್ಬ ಇದೀಗ ಅಮಲಾ ವಿರುದ್ಧ ಕಿಡಿಕಾರಿದ್ದಾರೆ. ಸಂತ್ರಸ್ತನು ಐಟಿ ಉದ್ಯೋಗಿಯಾಗಿದ್ದು, ಅಮಲಾ ವಿರುದ್ಧ ದೂರು ದಾಖಲಿಸಿದ್ದಾರೆ. ಯೂಟ್ಯೂಬ್ ಸಂದರ್ಶನವೊಂದರಲ್ಲಿ ಮಾತನಾಡಿರುವ ಸಂತ್ರಸ್ತ, ಸಣ್ಣ ಮೊತ್ತದ ಹಣ ಹೂಡಿಕೆ ಮಾಡಿದರೆ ಒಂದೇ ಗಂಟೆಯಲ್ಲಿ ಹೂಡಿಕೆ ಮಾಡಿದ ಹಣಕ್ಕಿಂತ ಮೂರು ಪಟ್ಟ ಹೆಚ್ಚು ಗಳಿಸಬಹುದು ಎಂದು ಅಮಲಾ ಅವರು ಪ್ರಮೋಷನ್ ನೀಡಿದ್ದರು. ಅದನ್ನು ನಂಬಿ ಹೂಡಿಕೆ ಮಾಡಿ ಹಣ ಕಳೆದುಕೊಂಡೆ ಎಂದು ಆರೋಪ ಮಾಡಿದ್ದಾನೆ.
ಒಂದು ಗಂಟೆಯಲ್ಲಿ 15 ಸಾವಿರ ಕೊಟ್ಟರೆ 55 ಸಾವಿರ ಸಿಗುತ್ತದೆ ಎಂಬ ಪ್ರಮೋಷನ್ ವಿಡಿಯೋ ನಂಬಿ ಹಣ ಐಟಿ ಉದ್ಯೋಗಿ ಹಣ ಹೂಡಿದ್ದ. ವಕೀಲ ವಿಘ್ನೇಶ್ ಮುತ್ತುಕುಮಾರ್ ಎಂಬುವರು ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಸಂತ್ರಸ್ತನ ಹೇಳಿಕೆಯ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ
ಹಣ ಪಡೆದ ಅಮಲಾ ಶಾಜಿ ಯಾವುದೇ ಪ್ರತಿಕ್ರಿಯೆ ನೀಡದೆ ತಾಂತ್ರಿಕ ದೋಷ ಎಂಬ ಸಬೂಬು ನೀಡಿ ಹಣ ದೋಚಲು ಯತ್ನಿಸಿದ್ದಾರೆ ಎಂದು ಸಂತ್ರಸ್ತ ಅಳಲು ತೋಡಿಕೊಂಡಿದ್ದಾನೆ. ಈ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಅಮಲಾ ಶಾಜಿಯನ್ನು ವಿಚಾರಣೆಗೆ ಒಳಪಡಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.