ಹುಬ್ಬಳ್ಳಿ: ಚಿಕ್ಕ ವ್ಯಾಪಾರಸ್ಥರಿಗೆ ಜನತಾ ಬಜಾರ್ನಲ್ಲಿ ನಿರ್ಮಿಸಿರುವ ಕಟ್ಟಾ ಅಥವಾ ಶೆಡ್ಗಳನ್ನು ಹಸ್ತಾಂತರ ಮಾಡಲು ಒತ್ತಾಯಿಸಿ ಸೂಪರ್ ಮಾರ್ಕೆಟ್ ಚಿಕ್ಕ ವರ್ತಕರ ಸಂಘದಿಂದ ನಗರದ ಮಹಾನಗರ ಪಾಲಿಕೆ ಕಚೇರಿ ಮುಂದೆ ಡಿ. 30ರಂದು ಮಧ್ಯಾಹ್ನ 12ಕ್ಕೆ ಮಾರುಕಟ್ಟೆ ಮಾದರಿಯಲ್ಲಿ ವಿನೂತನ ಪ್ರತಿಭಟನೆ ಆಯೋಜಿಸಲಾಗಿದೆ ಎಂದು ಸಂಘದ ಗೌರವ ಅಧ್ಯಕ್ಷ ಪ್ರೇಮನಾಥ ಚಿಕ್ಕತುಂಬಳ ತಿಳಿಸಿದರು.
ನಗರದಲ್ಲಿ ಮಾಹಿತಿ ನೀಡಿದರು ಜನತಾ ಬಜಾರ್ನಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಹೊಸದಾಗಿ ನಿರ್ಮಿಸಿರುವ ಮಾರುಕಟ್ಟೆ ಸಂಕೀರ್ಣದಲ್ಲಿ ಮೂಲ ಚಿಕ್ಕ ವ್ಯಾಪಾರಸ್ಥರಿಗೆ ಕಟ್ಟಾ ಅಥವಾ ಶೆಡ್ಗಳನ್ನು ಮರು ಹಂಚಿಕೆ ಮಾಡಬೇಕು. ಮುಂದೆ ಲೋಕಸಭೆ ಚುನಾವಣೆ ಬರಲಿದೆ.
ನೀತಿ ಸಂಹಿತೆ ಜಾರಿಯಾಗಲಿದೆ. ಇದರಿಂದ ಮತ್ತಷ್ಟು ಹಂಚಿಕೆ ವಿಳಂಬವಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಜನವರಿ ತಿಂಗಳಲ್ಲಿ ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಿದರು.
ಅಂದು ಮಹಾನಗರ ಪಾಲಿಕೆ ಸಾಮಾನ್ಯ ಸಭೆ ನಡೆಯಲಿದೆ. ನಾವು ಹೊರಗಡೆ ವಿನೂತನ ಪ್ರತಿಭಟನೆ ನಡೆಸುತ್ತೇವೆ. ನಂತರ ಮಹಾನಗರ ಪಾಲಿಕೆ ಆಯುಕ್ತರು, ಮೇಯರ್ಗೆ ಮನವಿ ಸಲ್ಲಿಸಿ, ಗಡುವು ನೀಡಲಾಗುವುದು ಎಂದು ವಿವರಿಸಿದರು.
ಸಂಘದ ಅಧ್ಯಕ್ಷ ಎಂ.ಎ. ಮುಜಾಹಿದ್, ಉಪಾಧ್ಯಕ್ಷ ನಾರಾಯಣ ಮುದ್ದಣ್ಣವರ, ವಿಷ್ಣುಸಾ ಖೋಡೆ, ಬಸವರಾಜ ಕುರಿ ಸುದ್ದಿಗೋಷ್ಠಿಯಲ್ಲಿದ್ದರು.