ಬೆಂಗಳೂರು:- ನವೆಂಬರ್ 14 ಮಕ್ಕಳ ದಿನಾಚರಣೆ ಆಚರಣೆ ಪ್ರಯುಕ್ತ ಕಬ್ಬನ್ ಪಾರ್ಕ್ನ ಬಾಲಭವನ ಆವರಣದಲ್ಲಿ ಮಕ್ಕಳಿಗೋಸ್ಕರ ಅಂತನೇ ಪುಷ್ಪ ಪ್ರದರ್ಶನ ಏರ್ಪಡಿಸಲಾಗಿದೆ. ನೋಡುಗರ ಕಣ್ಮನ ಸೆಳೆಯುತ್ತಿದೆ.
ತೋಟಗಾರಿಕೆ ಇಲಾಖೆ, ಬಾಲಭವನ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದೊಂದಿಗೆ ಫಲಪುಷ್ಪ ಪ್ರದರ್ಶನ ಏರ್ಪಡಿಸಲಾಗಿದೆ.
ಮಕ್ಕಳ ವಿಷಯಾಧಾರಿತ ಹಾಗೂ ಮಕ್ಕಳಲ್ಲಿ ಪೃಕೃತಿ ಕುರಿತಂತೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪುಷ್ಪ ಪ್ರದರ್ಶನ ಆಯೋಜನೆ ಮಾಡಲಾಗಿದೆ. ಶುಕ್ರವಾರ ರಿಂದ ಆರಂಭವಾಗಿರುವ ಫಲಪುಷ್ಪ ಪ್ರದರ್ಶನ ಮೂರು ದಿನಗಳವರೆಗೆ ನಡೆಯಲಿದ್ದು, ಡಿಸೆಂಬರ್ 1 ರಂದು ಅಂತ್ಯವಾಗಲಿದೆ. ಸಾರ್ವಜನಿಕರಿಗೆ ನೋಡಲು ಅವಕಾಶ ಕಲ್ಪಿಸಲಾಗಿದೆ.
ಕಬ್ಬನ್ ಪಾರ್ಕ್ಗೆ ಬಂದ ಜನರು ಫಲಪುಷ್ಪ ಪ್ರದರ್ಶನವನ್ನು ಕಂಡು ಆನಂದ ಪಟ್ಟರು. ಪುಷ್ಪಗಳಲ್ಲಿ ಮೂಡಿದ ನವಿಲು, ರಾಕೇಟ್, ರೊಬೋಟ್, ಡೈನಾಸೋರ್, ಆನೆಗಳು ಜನರನ್ನು ಆಕರ್ಷಿಸಿದವು.
ವರ್ಲ್ಡ್ ಕಪ್ ಟ್ರೋಫಿ ಸೇರಿದಂತೆ ಇನ್ನೀತರ ಫಲಪುಷ್ಪ ಕೃತಿಗಳ ಮುಂದೆ ನಿಂತು ಜನರು ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು.