ಕಲ್ಬುರ್ಗಿ:- ಭಿಕ್ಷಾಟನೆ ಹಣದಲ್ಲಿ ಪಾಲು ಕೊಟ್ಟಿಲ್ಲ ಎಂದು ತಮ್ಮ ಜೊತೆಗಾರ್ತಿಯನ್ನೇ ಬೆತ್ತಲೆ ಮಾಡಿ ಮಂಗಳಮುಖಿ ಹಲ್ಲೆ ಮಾಡಿ ಕ್ರೌರ್ಯ ಮೆರೆದಿರುವ ಘಟನೆ ಕಲಬುರ್ಗಿಯಲ್ಲಿ ಜರುಗಿದೆ.
ವಾಟ್ಸಪ್ ಬಳಕೆದಾರರಿಗೆ ಗುಡ್ನ್ಯೂಸ್: ನೆಟ್ ಇಲ್ಲದೆ ಫೋಟೋ, ವಿಡಿಯೋ ಶೇರ್ ಮಾಡ್ಬಹುದು! ಹೇಗೆ?
ಅಂಕಿತಾ ಎಂಬವರ ಮೇಲೆ ಹಾಡಹಗಲೇ ಏಕಾಕಿ ಹಲ್ಲೆ ಮಾಡಿದ್ದಾರೆ. ಮನಸೋಇಚ್ಛೆ ಥಳಿಸಿರುವ ಆರು ಜನ ಮಂಗಳ ಮುಖಿಯರು, ನಂತರ ಇಡೀ ನಾಗರಿಕ ಸಮಾಜವೇ ತಲೆ ತಗ್ಗಿಸುವ ರೀತಿ ಅಂಕಿತಾಳನ್ನು ಬೆತ್ತಲೆ ಮಾಡಿ, ತಲೆಗೂದಲು ಕಟ್ ಮಾಡಿ ಅಮಾನವೀಯವಾಗಿ ವರ್ತಿಸಿದ್ದಾರೆ.
ಕಳೆದ ಹಲವಾರು ದಿನಗಳಿಂದ ಮಾಲಾ ಎಂಬವರ ಜೊತೆಯಲ್ಲಿ ಇರುತ್ತಿದ್ದ ಅಂಕಿತಾ, ತಾನು ಭಿಕ್ಷಾಟನೆ ಮಾಡಿದ ಹಣವೆಲ್ಲಾ ಮಾಲಾಳಿಗೆ ನೀಡುತ್ತಿದ್ದಳಂತೆ. ಪ್ರತಿ ದಿನ 2-3 ಸಾವಿರ ರೂ. ಹಣ ನೀಡುತ್ತಾ ಬಂದಿದ್ದಾಳೆ. ಸದ್ಯ ಕೊಟ್ಟ ಹಣ ವಾಪಸ್ ಕೇಳಿದ್ದಕ್ಕೆ ಹಲ್ಲೆ ಮಾಡಿದ್ದಾಳೆಂದು ಅಂಕಿತಾ ಅಳಲು ತೋಡಿಕೊಂಡಿದ್ದಾಳೆ. ತನ್ನ ಮೇಲೆ ಹಲ್ಲೆ ಮಾಡಿದವರಿಗೆ ಕಠಿಣ ಶಿಕ್ಷೆಯಾಗಬೇಕು ಎಂದಿದ್ದಾರೆ.
ಅಷ್ಟೆ ಅಲ್ಲದೇ ಇತ್ತಿಚಗೆ ಅಂಕಿತಾ, ಮಾಲಾ ಜೊತೆ ಇರುವುದನ್ನು ಬಿಟ್ಟಿದ್ದಳಂತೆ. ಅಲ್ಲದೇ ನಿತ್ಯ ಹಣ ಕೋಡುವುದನ್ನು ಕೂಡಾ ನಿಲ್ಲಿಸಿದ್ದಳಂತೆ. ಈ ಕಾರಣಕ್ಕಾಗಿ ಹಲವು ಭಾರಿ ಅಂಕಿತಾ ಮೇಲೆ ಹಲ್ಲೆ ಮಾಡಲಾಗಿದೆ ಎಂದೂ ಆರೋಪಿಸಲಾಗಿದೆ. ಅದು ವಿಕೋಪಕ್ಕೆ ಹೋಗಿ ಇದೀಗ ನಾಗರಿಕ ಸಮಾಜವೇ ತಲೆ ತಗ್ಗಿಸುವ ರೀತಿ ಮಾಡಿದ್ದಾರೆ.
ಘಟನೆ ಕಲಬುರಗಿ ನಗರದಲ್ಲಾದರೆ, ಅತ್ತ ಪ್ರಸಿದ್ದ ಧಾರ್ಮಿಕ ಕ್ಷೇತ್ರ ಗಾಣಗಾಪುರದ ದತ್ತಾತ್ರೇಯ ದೇವಸ್ಥಾನದಲ್ಲಿ ಮಂಗಳಮುಖಿಯ ಮತ್ತೊಂದು ತಂಡ ಪರಸ್ಪರ ಜುಟ್ಟು ಹಿಡಿದುಕೊಂಡು ಹೊಡೆದಾಡಿಕೊಂಡಿದೆ. ಬೇರೆ ಕಡೆಯಿಂದ ಬಂದು ದೇವಸ್ಥಾನದಲ್ಲಿ ಭಿಕ್ಷಾಟನೆ ಮಾಡುತ್ತಿದ್ದಾರೆಂದು ಮಂಗಳಮುಖಿಯರು ಥಳಿಸಿದ್ದಾರೆ