ತೆಲಂಗಾಣ: ಪೂರಿ ಎಂದರೆ ತುಂಬಾ ಜನರಿಗೆ ಇಷ್ಟವಾದ ಉಪಾಹಾರ. ಬಹುತೇಕ ಎಲ್ಲಾ ಮಕ್ಕಳು ಬೆಳಗ್ಗೆ ಏನು ತಿಂಡಿ ಬೇಕು ಎಂದು ಕೇಳಿದ್ರೆ ಪೂರಿನೇ ಬೇಕು ಅಂತಾ ಹೇಳುತ್ತಾರೆ. ಹೋಟೆಲ್ಗಳಿಗೆ ಹೋದರೂ ಪೂರಿ ಬೇಕು ಅಂತಾ ಹಟ ಹಿಡಿಯುತ್ತಾರೆ. ಅದೇ ರೀತಿ ಇಲ್ಲೊಬ್ಬ ಬಾಲಕ ಇಷ್ಟ ಪಟ್ಟು ಪೂರಿ ಸೇವಿಸಲು ಹೊಗಿ ಮಸಣ ಸೇರಿರುವ ಘಟನೆ ತೆಲಂಗಾಣದ ಸಿಕಂದರಾಬಾದ್ನ ಶಾಲೆಯೊಂದರಲ್ಲಿ ನಡೆದಿದೆ. ಮೃತ ಬಾಲಕನನ್ನು 6ನೇ ತರಗತಿಯ ವಿಕಾಸ್ ಜೈನ್ ಎಂದು ಗುರುತಿಸಲಾಗಿದೆ.
Constitution Day 2024: ನವೆಂಬರ್ 26 “ಸಂವಿಧಾನ ದಿನ”ವೆಂದು ಏಕೆ ಆಚರಿಸುತ್ತಾರೆ.? ಇದರ ಇತಿಹಾಸ, ಇಲ್ಲಿದೆ ಮಾಹಿತಿ
ಸಿಕಂದರಾಬಾದ್ನ ತಿವೋಲಿ ಥಿಯೇಟರ್ ಬಳಿ ಇರುವ ಶಾಲೆಯಲ್ಲಿ ವಿಕಾಸ್ ಜೈನ್ 6ನೇ ತರಗತಿಯಲ್ಲಿ ಓದುತ್ತಿದ್ದ. ಮನೆಯಿಂದ ತಂದ ಪೂರಿಯನ್ನು ಮಧ್ಯಾಹ್ನ ಊಟದ ಸಮಯದಲ್ಲಿ ತಿನ್ನುವಾಗ ಈ ಘಟನೆ ಸಂಭವಿಸಿದೆ. ಶಾಲೆಯಲ್ಲಿ ಮಧ್ಯಾಹ್ನ ಊಟದ ವೇಳೆ ಮೂರು ಪೂರಿ ಒಟ್ಟಿಗೆ ತಿಂದ ಪರಿಣಾಮ ಬಾಲಕನಿಗೆ ಉಸಿರುಗಟ್ಟಿ ನೆಲಕ್ಕೆ ಕುಸಿದಿದ್ದಾನೆ. ಎಷ್ಟೇ ಎಚ್ಚರಗೊಳಿಸಿದರೂ ಪ್ರಜ್ಞೆ ಬರದ ಕಾರಣ ಆತನನ್ನು ಕೂಡಲೇ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಯಿತು. ಬಳಿಕ ವೈದ್ಯರು ತಪಾಸಣೆ ಮಾಡಿ ಸಾವನ್ನಪ್ಪಿರುವುದಾಗಿ ಧೃಡಪಡಿಸಿದ್ದಾರೆ.
ಶಾಲಾ ಆಡಳಿತ ಮಂಡಳಿ ಬಾಲಕನ ಪೋಷಕರಿಗೆ ಕರೆ ಮಾಡಿ ನಿಮ್ಮ ಮಗ ಊಟದ ಸಮಯದಲ್ಲಿ ಒಟ್ಟಿಗೆ ಮೂರು ಪೂರಿ ತಿಂದ ಪರಿಣಾಮ ಉಸಿರುಗಟ್ಟಿ ಸಾವನ್ನಪ್ಪಿದ್ದಾನೆ ಎಂದು ತಿಳಿಸಿದ್ದಾರೆ. ಸದ್ಯ ಪೊಲೀಸರು ಮೃತ ಬಾಲಕನ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.