ಗದಗ:- ಅಮಿತ್ ಶಾ ಹೇಳಿಕೆ ಖಂಡಿಸಿ ಇಂದು ಗದಗ ಬಂದ್ ಗೆ ಕರೆ ಕೊಡಲಾಗಿದೆ.
ಕಪ್ಪಾದ ಉದ್ದ ಕೂದಲು ನಿಮ್ಮದಾಗ್ಬೇಕಾ? ಸೈಡ್ ಎಫೆಕ್ಟ್ ಇಲ್ಲದೇ ಮೊಸರಿನಿಂದ ಹೀಗೆ ಮಾಡಿ!
ಅದರಂತೆ ಗದಗ ನಗರದ ಮುಳಗುಂದ ನಾಕಾದಲ್ಲಿ ಕೇಂದ್ರ ಸಚಿವ ಅಮಿತ್ ಶಾ ವಿರುದ್ಧ ಆಕ್ರೋಶ ಹೊರ ಹಾಕಿರುವ ಪ್ರತಿಭಟನಾಕಾರರು, ಕೇಂದ್ರ ಗೃಹ ಸಚಿವರ ಭಾವಚಿತ್ರಕ್ಕೆ ಚಪ್ಪಲಿ ಸೇವೆ ಮಾಡಿದ್ದಾರೆ.
ಪ್ರತಿಭಟನಾ ನಿರತರಿಂದ ಅಮಿತ್ ಶಾ ಭಾವ ಚಿತ್ರಕ್ಕೆ ಚಪ್ಪಲಿ ಏಟು ಹೊಡೆದು, ಬಳಿಕ ಬೆಂಕಿ ಹಚ್ಚಿ ಆಕ್ರೋಶ ಹೊರ ಹಾಕಿದ್ದಾರೆ. ಇನ್ನೂ ಕೆಲ ದಲಿತ ಮುಖಂಡರು, ಅಮಿತ್ ಶಾ ಭಾವಚಿತ್ರ ಹರಿದು ಬಾಯಿ ಬಡೆದುಕೊಂಡಿದ್ದಾರೆ.
ಈ ವೇಳೆ ಭಾವಚಿತ್ರ ಸುಡುತ್ತಿದ್ದ ಮುಖಂಡರನ್ನು ತಡೆಯಲು ಪೊಲೀಸರು ಮುಂದಾದರು. ಆದರೂ ಖಾಕಿಯಿಂದ ತಪ್ಪಿಸಿಕೊಂಡು ಡಿಎಸ್ ಎಸ್ ಸದಸ್ಯರು, ಅಮಿತ್ ಶಾರ ಭಾವಚಿತ್ರ ಸುಟ್ಟಿದ್ದಾರೆ.