ಹುಬ್ಬಳ್ಳಿ;ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ, ಹಾಗೂ ಅವರ ರಾಜೀನಾಮೆಗೆ ಆಗ್ರಹಿಸಿ ವಿವಿಧ ಸಂಘಟನೆಗಳು ಜ. 9ರಂದು ಗುರುವಾರ ಹುಬ್ಬಳ್ಳಿ – ಧಾರವಾಡ ಅವಳಿನಗರ ಬಂದ್ಗೆ ಕರೆ ನೀಡಿವೆ.
ಮಂಡ್ಯದಲ್ಲಿ ವಿಜೃಂಭಣೆ ಹಾಗೂ ಅರ್ಥಪೂರ್ಣವಾಗಿ ಗಣರಾಜ್ಯೋತ್ಸವ ಆಚರಣೆ: ಡಾ ಕುಮಾರ*
ಈ ಕುರಿತು ನಗರದಲ್ಲಿಂದು ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿದ ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರ ಸ್ವಾಭಿಮಾನಿ ಅಭಿಮಾನಿ ಅನುಯಾಯಿಗಳ ಬಳಗದ ಮುಖಂಡ ಗುರುನಾಥ ಉಳ್ಳಿಕಾಶಿ ಹೇಳಿದರು. ಈ ಬಂದ್ ಗೆ ಸುಮಾರು 100ಕ್ಕೂ ಅಧಿಕ ಸಕಲ ಸಮಾಜದ ಪ್ರಮುಖ ಸಂಘ ಸಂಸ್ಥೆಗಳು ದಿ. 4 ಮತ್ತು 5ರಂದು ನಡೆದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಬೆಂಬಲ ಸೂಚಿಸಿದ್ದು, ಅವಳಿನಗರ ಸ್ತಬ್ಧಗಳೊಳ್ಳುವುದು ಖಚಿತ ಎಂದರು.
ಬಂದ್ ನಿಮಿತ್ತ ಶಾಂತಿ ಸದ್ಭಾವನೆಯೊಂದಿಗೆ ಬಡಾವಣೆಗಳಿಂದ ಮೆರವಣಿಗೆ ಮೂಲಕ ತಮ್ಮ ವ್ಯಾಪ್ತಿಯ ಬಂದ್ ನೊಂದಿಗೆ ಹುಬ್ಬಳ್ಳಿಯ ಚನ್ನಮ್ಮ ವೃತ್ತ ಮತ್ತು ಧಾರವಾಡದ ಜುಬಿಲಿ ವೃತ್ತದಲ್ಲಿ ಸಮಾವೇಶಗೊಳ್ಳಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಬಂದ್ ನ.9 ರಂದು ಗುರುವಾರ ಮುಂಜಾನೆ 06 ರಿಂದ ಸಂಜೆ 06ರ ವರೆಗೆ ನಡೆಯಲಿದ್ದು, ಸಾರ್ವಜನಿಕರು ಅಂದಿನ ಬಂದ್ ಬೆಂಬಲಿಸಲು ಮನವಿ ಮಾಡಲಾಗಿದೆ. ಸದರಿ ಬಂದ್ ಗೆ ಸಾರ್ವಜನಿಕರ ಹಿತದೃಷ್ಟಿಯಿಂದ ಆಸ್ಪತ್ರೆಗಳು- ಔಷಧ ಮಳಿಗೆಗಳು, ವಾಣಿಜ್ಯ ವ್ಯವಹಾರ ಹೋಟೆಲ್ ಸಿನಿಮಾ ಆಟೋ, ಶಾಲಾ ಕಾಲೇಜು, ಸರ್ಕಾರಿ ಕಚೇರಿ,ವಾಹನ ಸಹಿತ ಸಕಲ ಚಟುವಟಿಕೆ ಬಂದ್ ಮಾಡುವ ಮೂಲಕ ಪ್ರತಿಭಟನೆ ನಡೆಸಲಾಗುವುದು ಎಂದರು.
ಅನುಯಾಯಿ ಬಳಗದ ಎಮ್. ಅರವಿಂದ್, ಶ್ಯಾಮ ಜಾಧವ್, ಮಾರುತಿ ದೊಡ್ಡಮನಿ, ದೊರೆರಾಜ ಮನಿಕುಂಟ್ಲ್, ಸುರೇಶ ಕನ್ನಮಕ್ಕಲ್, ನಾಗೇಶ ಕತ್ರಿಮಲ್ಲ, ಶ್ರೀನಿವಾಸ ಬೆಳದಡಿ, ದೇವಣ್ಣ ಇಟಗಿ ಮುಂತಾದವರು ಇದ್ದರು.