ಬಾಲಿವುಡ್ ಖ್ಯಾತ ನಟಿ ಅಮೀಷಾ ಪಟೇಲ್ ಸದ್ಯ ಸಿನಿಮಾ ರಂಗದಿಂದ ದೂರ ಉಳಿದಿದ್ದಾರೆ. 2023ರಲ್ಲಿ ತೆರೆಕಂಡ ಗದರ್ 2 ಸಿನಿಮಾದ ಬಳಿಕ ಅಮೀಷಾ ಸಿನಿಮಾಗಳಿಂದ ದೂರು ಉಳಿದಿದ್ದು ವೈಯಕ್ತಿಕ ವಿಚಾರವಾಗಿಯೇ ಹೆಚ್ಚು ಹೆಚ್ಚು ಸದ್ದು ಮಾಡುತ್ತಿದ್ದಾರೆ. ಇದೀಗ ತನಗಿಂತ 19 ವರ್ಷ ಕಿರಿಯ ಉದ್ಯಮಿ ಜೊತೆ ಅಮೀಷಾ ಪಟೇಲ್ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾದ ಸುದ್ದಿಯೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು ಫೋಟೋವೊಂದು ವೈರಲ್ ಆಗಿದೆ.
ಸಾಮಾಜಿಕ ಜಾಲತಾಣದಲ್ಲಿ ಸದಾ ಆಕ್ಟೀವ್ ಆಗಿರುವ ನಟಿ ಇತ್ತೀಚೆಗೆ ಉದ್ಯಮಿ ನಿರ್ವಾಣ್ ಬಿರ್ಲಾ ಅವರೊಂದಿಗಿನ ಖಾಸಗಿ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಫೋಟೋವನ್ನು ಪೋಸ್ಟ್ ಮಾಡಿದ ನಟಿ, ‘ನನ್ನ ಡಾರ್ಲಿಂಗ್ ಜೊತೆ ಒಂದೊಳ್ಳೆಯ ಸಂಜೆ…’ ಎಂದು ಶೀರ್ಷಿಕೆ ನೀಡಿದ್ದಾರೆ. ನಟಿಯ ಫೋಟೋ ದುಬೈನಲ್ಲಿ ತೆಗೆಸಿಕೊಂಡಿರುವುದಾಗಿದೆ.
ಫೋಟೋದಲ್ಲಿ ಅಮಿಷಾ ಮತ್ತು ನಿರ್ವಾಣ್ ಇಬ್ಬರೂ ಸಂತೋಷದಿಂದ ಇದ್ದಾರೆ. ಫೋಟೋದಲ್ಲಿ ಇಬ್ಬರೂ ಕಪ್ಪು ಬಟ್ಟೆ ಧರಿಸಿದ್ದಾರೆ. ಸದ್ಯ ಅಮಿಷಾ ಅವರ ಖಾಸಗಿ ಬದುಕಿನ ಬಗ್ಗೆ ಮಾತ್ರ ಎಲ್ಲೆಡೆ ಚರ್ಚೆಯಾಗುತ್ತಿದೆ. ಇವರಿಬ್ಬರ ಫೋಟೋಗೆ ಅಭಿಮಾನಿಗಳು ಕೂಡ ಲೈಕ್ ಮತ್ತು ಕಮೆಂಟ್ ಮೂಲಕ ಪ್ರತಿಕ್ರಿಯಿಸುತ್ತಿದ್ದಾರೆ.
ನಿರ್ವಾಣ ಒಬ್ಬ ವಾಣಿಜ್ಯೋದ್ಯಮಿ ಮತ್ತು ಗಾಯಕ. ಅವರು ಬಿರ್ಲಾ ಬ್ರೈನಿಯಾಕ್ಸ್ ಮತ್ತು ಬಿರ್ಲಾ ಓಪನ್ ಮೈಂಡ್ಸ್ ಸಂಸ್ಥಾಪಕರೂ ಆಗಿದ್ದಾರೆ. ಯಶೋವರ್ಧನ್ ಬಿರ್ಲಾ ಮತ್ತು ಅವಂತಿ ಬಿರ್ಲಾ ಅವರ ಮಗ ಈ ನಿರ್ವಾಣ್.
ಇಲ್ಲಿಯವರೆಗೆ ಅಮಿಶಾ ಪಟೇಲ್ ಹೆಸರನ್ನು 4 ವಿವಾಹಿತ ಪುರುಷರೊಂದಿಗೆ ಚರ್ಚಿಸಲಾಗಿದೆ. ನಿರ್ದೇಶಕ ವಿಕ್ರಮ್ ಭಟ್ ಅವರೊಂದಿಗಿನ ನಟಿಯ ಸಂಬಂಧವು ಹೆಚ್ಚು ವರ್ಣರಂಜಿತವಾಯಿತು. ಅವರು ಸುಮಾರು 5 ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡಿದ್ದಾರೆ. ಆದರೆ ಸಂಬಂಧ ಹೆಚ್ಚು ಕಾಲ ಉಳಿಯಲಿಲ್ಲ.