ಬೆಂಗಳೂರು:- ಮಂಡ್ಯದ ಗಂಡು ದಿವಂಗತ ಅಂಬರೀಶ್ ಅವರ ಮನೆಯಲ್ಲಿ ಸಂಭ್ರಮ ಮನೆಮಾಡಿದೆ. ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಸುಮಲತಾ ಅಂಬರೀಶ್ ಅವರ ಮೊಮ್ಮಗನ ನಾಮಕರಣ ಸಮಾರಂಭ ನಡೆಯಲಿದೆ.
2 ವರ್ಷಗಳ ನಂತರ ನಡೆದ ಜಾನಪದ ಅಕಾಡೆಮಿ ವಾರ್ಷಿಕ ಗೌರವ ಪ್ರಶಸ್ತಿ ಕಾರ್ಯಕ್ರಮ
ಸಮಾರಂಭಕ್ಕೆ ಸ್ಯಾಂಡಲ್ವುಡ್ನ ಅನೇಕ ಗಣ್ಯರಿಗೆ ಆಹ್ವಾನ ನೀಡಲಾಗಿದೆ. ಜೊತೆಗೆ ಈ ನಾಮಕರಣ ಕಾರ್ಯಕ್ರಮದಲ್ಲಿ ದರ್ಶನ್ ಭಾಗಿ ಆಗ್ತಾರಾ ಅನ್ನೋ ಪ್ರಶ್ನೆ ಕೂಡ ಮೂಡಿದೆ.
ಮೊನ್ನೆಯಷ್ಟೇ ಸುಮಲತಾ ಅಂಬರೀಶ್, ಅಭಿಷೇಕ್ ಅಂಬರೀಶ್ ಮತ್ತು ಅವಿವಾ ಅಭಿಷೇಕ್ ಅವರನ್ನು ಸೋಷಿಯಲ್ ಮೀಡಿಯಾದಲ್ಲಿ ದರ್ಶನ್ ಅನ್ಫಾಲೋ ಮಾಡಿದ್ದರು. ಅಂಬರೀಶ್ ಕುಟುಂಬದ ಮೇಲೆ ದರ್ಶನ್ಗೆ ಮುನಿಸು ಎಂದು ಹೇಳಲಾಗಿತ್ತು. ಆದರೆ, ಆ ರೀತಿಯ ಮುನಿಸು ಯಾವುದೂ ಇಲ್ಲ ಅಂತ ಈಗಾಗಲೇ ಸುಮಲತಾ ಅಂಬರೀಶ್ ಸ್ಪಷ್ಟ ಪಡಿಸಿದ್ದಾರೆ
ಅಭಿಷೇಕ್ ಮತ್ತು ಅವಿವಾ ದಂಪತಿಯ ಮಗುವಿನ ನಾಮಕರಣಕ್ಕೆ ಮನೆಮಗ ದರ್ಶನ್ ರ್ತಾರಾ? ಬರಲ್ವಾ ಅನ್ನೋದು ಕುತೂಹಲಕ್ಕೆ ಕಾರಣವಾಗಿದೆ. ಒಟ್ಟಾರೆ ಕೆಲವೇ ಗಂಟೆಗಳಲ್ಲಿ ಇದಕ್ಕೆ ಉತ್ತರ ಸಿಗಲಿದೆ.