ಬೆಂಗಳೂರು:- ಅಂಬಾನಿ ಪುತ್ರನ ಮದುವೆ ಆಮಂತ್ರಣದ ಬಗ್ಗೆ ಸಿಎಂ ಸಿದ್ದರಾಮಯ್ಯ ಕಚೇರಿಯಿಂದ ಸ್ಪಷ್ಟನೆ ನೀಡಲಾಗಿದೆ.
ನಿಮಗಿದು ಗೊತ್ತಾ!?..ಮಧುಮೇಹ ಬರಬಾರದೆಂದರೆ ಪ್ಲಾಸ್ಟಿಕ್ ಬಾಟಲಿಯಲ್ಲಿ ನೀರು ಕುಡಿಯೋದನ್ನ ಬಿಟ್ಟುಬಿಡಿ!
ಉದ್ಯಮಿ ಮುಕೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿಯ ಮದುವೆ ನಡೆಯಲಿದೆ. ಈಗಾಗಲೇ ಮದುವೆ ಆಮಂತ್ರಣ ಪತ್ರಿಕೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸಿಎಂ ಸಿದ್ದರಾಮಯ್ಯಗೂ ಮದುವೆ ಆಹ್ವಾನಿಸಲಾಗಿದೆ ಎಂದು ವಿಡಿಯೋ ವೈರಲ್ ಮಾಡಲಾಗಿದೆ. ಈ ಕುರಿತಾಗಿ ಸ್ಪಷ್ಟನೆ ನೀಡಿರುವ ಸಿಎಂ ಕಚೇರಿ ಅಧಿಕೃತವಾಗಿ ಯಾವುದೇ ಆಹ್ವಾನ ಬಂದಿಲ್ಲ ಎಂದಿದ್ದಾರೆ.
ಆಮಂತ್ರಣ ಪತ್ರಿಕೆ ಮೇಲೆ ಸಿಎಂ ಸಿದ್ದರಾಮಯ್ಯ ಹಾಗೂ ಪತ್ನಿ ಪಾರ್ವತಿ ಹೆಸರು ಉಲ್ಲೇಖಿಸಿರುವ ಆಹ್ವಾನ ಪತ್ರಿಕೆ ಒಂದು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಆದರೆ ಈವರೆಗೆ ಯಾವುದೇ ರೀತಿಯ ಆಮಂತ್ರಣ ಸಿಎಂಗೆ ಬಂದಿಲ್ಲ. ಅಧಿಕೃತವಾಗಿ ಯಾವುದೇ ಆಹ್ವಾನ ಪತ್ರ ತಲುಪಿಲ್ಲ ಎಂದು ಸಿಎಂ ಕಚೇರಿಯಿಂದ ಸ್ಪಷ್ಟಪಡಿಸಲಾಗಿದೆ.
ಸೋಶಿಯಲ್ ಮೀಡಿಯಾದಲ್ಲಿ ಮುಖೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆ ಆಮಂತ್ರಣ ವೈರಲ್ ಆಗುತ್ತಿದೆ. ಚಿನ್ನದ ದೇವರ ವಿಗ್ರಹಗಳು, ಬೆಳ್ಳಿಯ ಪುಟ್ಟ ದೇವಾಲಯವಿರುವ ಬಾಕ್ಸ್ನೊಂದಿಗೆ ವಿಶೇಷವಾಗಿ ಮಾಡಿರುವ ಆಮಂತ್ರಣ ಪತ್ರ ವೈರಲ್ ಆಗುತ್ತಿದೆ.
![](https://ainlivenews.com/wp-content/uploads/2024/01/Ad-Banner-copy-scaled.jpg)