ಭಾರತ ತಂಡದ ಯುವ ವಿಕೆಟ್ ಕೀಪರ್ ಧ್ರುವ್ ಜುರೆಲ್ ಅವರು ಸ್ಟಾರ್ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ಅವರನ್ನು ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ವಿರಾಟ್ ಕೊಹ್ಲಿ ದೊಡ್ಡ ಕ್ರಿಕೆಟ್ ದಿಗ್ಗಜರಾಗಿದ್ದು, ಅವರಿಂದ ಏನಾದರೂ ಕಲಿಯಬೇಕೆಂದು ಸದಾ ಬಯಸುತ್ತೇನೆಂದು ಹೇಳಿದ್ದಾರೆ.
ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಧ್ರುವ್ ಜುರೆಲ್ ಅವರು ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಿದ್ದರು. ತಮ್ಮ ಪದಾರ್ಪಣೆ ಟೆಸ್ಟ್ ಸರಣಿಯಲ್ಲಿ ಅವರು ತಮ್ಮ ವಿಕೆಟ್ ಕೀಪಿಂಗ್ ಹಾಗೂ ಬ್ಯಾಟಿಂಗ್ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಅವರು ಆಡಿದ್ದ ಮೂರು ಟೆಸ್ಟ್ ಪಂದ್ಯಗಳಿಂದ 63.33ರ ಸರಾಸರಿಯಲ್ಲಿ 190 ರನ್ಗಳನ್ನು ಗಳಿಸಿದ್ದರು.
ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ವಿರಾಟ್ ಕೊಹ್ಲಿ ಮೂರೂ ಸ್ವರೂಪದಲ್ಲಿ ಆಧುಕಿನ ದಿಗ್ಗಜರಾಗಿದ್ದಾರೆ. ತಮ್ಮ ಬ್ಯಾಟಿಂಗ್ ಮೂಲಕ ಸಾಕಷ್ಟು ಯುವ ಆಟಗಾರರಿಗೆ ವಿರಾಟ್ ಕೊಹ್ಲಿ ಸ್ಪೂರ್ತಿಯಾಗಿದ್ದಾರೆ. ಅದರಂತೆ ಭಾರತ ತಂಡದ ಯುವ ವಿಕೆಟ್ ಕೀಪರ್ ಧ್ರುವ್ ಜುರೆಲ್ ಅವರಿಗೂ ಕೊಹ್ಲಿ ಸ್ಪೂರ್ತಿ ನೀಡಿದ್ದಾರೆ. ಅಂದ ಹಾಗೆ ವಿರಾಟ್ ಕೊಹ್ಲಿ ಹಾಗೂ ಧ್ರುವ್ ಜುರೆಲ್ ಅವರು ಇನ್ನೂ ಜೊತೆಯಲ್ಲಿ ಆಡಿಲ್ಲ.