ಹುಬ್ಬಳ್ಳಿ; ಕಲಘಟಗಿತಾಲೂಕಿನ ಬಹುದಿನಗಳ ಬೇಡಿಕೆ ಯಾಗಿದ್ದ ಇಂದಿರಾ ಕ್ಯಾಂಟೀನ್ ಉದ್ಘಾಟನೆ ಭಾಗ್ಯ ಯಾವಾಗ ಎಂಬ ಪ್ರಶ್ನೆ ಉದ್ಭವಿಸಿದೆ.
ಸಣ್ಣಪುಟ್ಟ ಬಡ ಜನರ ಕಾರ್ಮಿಕ ವರ್ಗದವರು ಉಪಹಾರ ಮಾಡುತ್ತೇವೆ ಎನ್ನುವ ಆಶಾಭಾವನೆಯಲ್ಲಿ ಇದ್ದವರಿಗೆ ನಿರಾಸೆ ಮೂಡಿಸಿದೆ. ರಾಜ್ಯ ಸರ್ಕಾರದ ಯೋಜನೆಗಳಲ್ಲಿ ಒಂದಾದ ಇಂದಿರಾ ಕ್ಯಾಂಟೀನ್ ಸಹ ಒಂದು ಹಲವಾರು ಕಾರಣಾಂತರಗಳಿಂದ ಕಲಘಟಗಿ ತಾಲೂಕಿಗೆ ಇಂದಿರಾ ಕ್ಯಾಂಟೀನ್ ಉಪಹಾರದ ಭಾಗ್ಯ ಅದ್ಯಾಕೋ ಇಲ್ಲಿವರೆಗೂ ದೊರೆತಿರಲಿಲ್ಲ. ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಕಟ್ಟಡ ಕಾಮಗಾರಿ ಕೆಲಸ ಪೂರ್ಣಗೊಳಿಸಿದರು.
ಐದು ತಿಂಗಳಾದರೂ ಕಟ್ಟಡ ಪೂರ್ಣವಾಗಿದ್ದರ ಆಹಾರಕ್ಕಾಗಿ ತಾಲೂಕಿನ ಬಡ ಜನರು ಪರಿತಪಿಸುತ್ತಿದ್ದರು ಯಾಕೆ ಬಡಜನರಿಗೋಸ್ಕರ ಇಲ್ಲಿವರೆಗೂ ಕ್ಯಾಂಟೀನ್ ಕಟ್ಟಡ ಉದ್ಘಾಟನಾ ಗೊಳ್ಳಲಿರುವುದು ಕೇದಕರ ಸಂಗತಿಯಾಗಿದೆ.
ಕಲಘಟಗಿ ಪಟ್ಟಣಕ್ಕೆ ಸಂತೆ ಮಾರುಕಟ್ಟೆಗೆ ಬರುವ ಸಣ್ಣ ವ್ಯಾಪಾರಿಗಳು ಬಡ ನಿರಾಶ್ರಿತ ಜನರಿಗೆ ಕಡಿಮೆ ದರದಲ್ಲಿ ಉಪಹಾರ ಸಿಗುತ್ತದೆ ಎಂದು ಕಾದು ಕೂತವರಿಗೆ ಹೊಟ್ಟೆಗೆ ಬರೆಯಿಟ್ಟಂತಾಗಿದೆ. ಕಲಘಟಗಿ ತಾಲೂಕು ಅತ್ಯಂತ ಹಿಂದುಳಿದ ಪ್ರದೇಶವಾಗಿದ್ದು ಅಭಿವೃದ್ಧಿ ಪೂರ್ವಕವಾದಂತಹ ಕೆಲಸ ಕಾರ್ಯಗಳಿಂದಲೇ ತಾಲೂಕು ಮುಂದು ಬರಬೇಕಾದಂತ ಪರಿಸ್ಥಿತಿ ಬಂದು ಒದಗಿದೆ. ಈಗಾಗಲೇ ಪ್ರತಿ ಜಿಲ್ಲೆಯ ತಾಲೂಕುಗಳಲ್ಲಿ ಇಂದಿರಾ ಕ್ಯಾಂಟೀನ್ ಉಪಹಾರದ ಸೇವೆ ಒದಗಿಸುತ್ತಾ ಬಂದಿದ್ದು ಕೂಲಿಕಾರರಿಗೆ,ಬಡ ಕುಟುಂಬದ ಜನರಿಗೆ,ಸಂತೆ ಮಾರುಕಟ್ಟೆ ಬರುವ ವ್ಯಾಪಾರಿಗಳಿಗೆ ಇಂದಿರಾ ಕ್ಯಾಂಟೀನ್ ಕಡಿಮೆ ದರದಲ್ಲಿ ಉಪಹಾರ ಹಾಗೂ ಸುಸರ್ಜಿತವಾದ ಕಟ್ಟಡದಿಂದ ಸಾಕಷ್ಟು ಅನುಕೂಲಕರವಾಗಿದೆ ಎನ್ನುವ ಮಾತು ಸಹ ಕೇಳಿ ಬರುತ್ತಿವೆ.
ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ನಡೆದ ಪಟ್ಟಣ ಪಂಚಾಯತಿ ಕಾರ್ಯಾಲಯದಲ್ಲಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ಒಂದು ತಿಂಗಳ ಅವಧಿಯಲ್ಲಿ ಇಂದಿರಾ ಕ್ಯಾಂಟೀನ್ ಉದ್ಘಾಟನೆಗೊಳ್ಳುವ ಗಡವು ನೀಡಿದ್ದರು. ಅನುದಾನದ ಕೊರತೆಯು ಅಧಿಕಾರಿಗಳ ನಿರ್ಲಕ್ಷವು ತಿಳಿದು ಬಂದಿಲ್ಲ.
ಕಲಘಟಗಿ ತಾಲೂಕಿಗೆ ಪ್ರತಿನಿತ್ಯ ಗ್ರಾಮೀಣ ಭಾಗದ ಜನರು ಸರಕಾರದ ಇಲಾಖೆಗಳಿಗೆ ಹಾಗೂ ಇತರೆ ಕೆಲಸ ಕಾರ್ಯಗಳಿಗಾಗಿ ಬರುತ್ತಾರೆ. ಬೇಗನೆ ಉದ್ಘಾಟನೆಗೊಂಡು ಬಡವರಿಗೆ ನಿರಾಶ್ರಿತರಿಗೆ ಕಡಿಮೆ ದರದಲ್ಲಿ ಊಟ ಉಪಹಾರ ಜನರಿಗೆ ನೀಡಿದರೆ ಹಸಿದವರ ಹೊಟ್ಟೆ ತುಂಬಿಸಿದಂತಾಗುತ್ತದೆ. ಶಂಕರಗೌಡ ಬಾವಿಕಟ್ಟಿ. ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷರು.
ಕ್ಯಾಂಟೀನ್ ಬೇಗ ಉದ್ಘಾಟನೆಗೊಳ್ಳಬೇಕೆಂಬುದೇ ತಾಲೂಕಿನ ಬಡ ಜನರ ಆಸೆಯಾಗಿದೆ. ಹೀಗೆ ಮುಂದುವರೆದರೆ ಸರಕಾರದ ಯೋಜನೆಗಳು ಹಾಳಾಗಿ ಹೋಗುವುದರಲ್ಲಿ ಸಂದೇಹವಿಲ್ಲ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಬಡವರಿಗಾಗಿ ಉಪಹಾರಕ್ಕೆ ಚಾಲನೆ ನೀಡುತ್ತಾರಾ ಇಲ್ಲವೋ ಕಾದುನೋಡಬೇಕಾಗಿದೆ. ವೀರಣ್ಣ ಕುಬಸದ. ಸ್ಥಳೀಯ ವ್ಯಾಪಾರಸ್ಥರು.