ರಷ್ಯಾ: ತಾಯಿ-ಮಗನ ಸಂಬಂಧಕ್ಕೆ ಭಾರತದಲ್ಲಿ ಎಷ್ಟು ಪೂಜ್ಯ ಸ್ಥಾನವಿದೆ ಅನ್ನೋದು ಎಲ್ಲರಿಗೂ ಗೊತ್ತಿದೆ. ಆದರೆ, ರಷ್ಯಾದಲ್ಲಿ ತಾಯಿಯೊಬ್ಬಳು ತಾನು ಬೆಳೆಸಿದ ಮಗನನ್ನೇ ವಿವಾಹವಾಗಿದ್ದಾಳೆ. ಈ ಮದುವೆ ಈಗ ರಷ್ಯಾದಲ್ಲಿ ಸಾಕಷ್ಟು ಸುದ್ದಿಯಾಗಿದೆ. ತನಗಿಂತ 31 ವರ್ಷ ಕಿರಿಯವನಾದ ಮಲ ಮಗನನ್ನು ಮದುವೆಯಾಗಿದ್ದಾಳೆ. 53 ವರ್ಷದ ಸಂಗೀತಗಾರ್ತಿಯಾಗಿರುವವ ಅಸಿಲು ಚಿಜೆವ್ಸ್ಕಯಾ ಮಿಂಗಾಲಿಮ್ ತನ್ನ 22 ವರ್ಷದ ಮಲಮಗ ಡೇನಿಯಲ್ ಚಿಜೆವ್ಸ್ಕಿಯನ್ನು ವಿವಾಹವಾಗುವ ಮೂಲಕ ಅಚ್ಚರಿ ಮೂಡಿಸಿದ್ದಾಳೆ.
ರಷ್ಯಾದ ಮಕ್ಕಳ ಕಲ್ಯಾಣ ಇಲಾಖೆ ಕೂಡ ಈ ಮದುವೆಗೆ ಅಚ್ಚರಿ ವ್ಯಕ್ತಪಡಿಸಿದೆ. ರಷ್ಯಾದ ರಿಪಬ್ಲಿಕ್ ಆಫ್ ಟಾಟರ್ಸ್ತಾನ್ನ ಕಜಾನ್ನಲ್ಲಿರುವ ರೆಸ್ಟೋರೆಂಟ್ನಲ್ಲಿ ದಂಪತಿಗಳು ಪರಸ್ಪರ ಒಟ್ಟಾಗಿ ಬಾಳುವುದಾಗಿ ಹಾಗೂ ಸಾಯುವವರೆಗೂ ಜೊತೆಯಾಗಿಯೇ ಇರುವುದಾಗಿ ಪ್ರಮಾಣ ಮಾಡಿ ಮದುವೆಯಾಗಿದ್ದಾರೆ. ಸ್ಥಳೀಯ ಮಾಧ್ಯಮಗಳಿಂದ ಪಡೆದ ಮಾಹಿತಿಯನ್ನು ನಂಬುವುದಾದರೆ,

ವಯಸ್ಸಾದಂತೆ ಈ ನೋವುಗಳು ನಿಮ್ಮನ್ನ ಕಾಡುತ್ತಿದ್ದರೆ.. ಇಲ್ಲಿದೆ ಉಚಿತ ಸಲಹೆ ಸರಳ ಚಿಕಿತ್ಸೆ- ಪರಿಹಾರ
ಮಿಂಗಲಿಮ್ ಅವರು ಡೇನಿಯಲ್ಗೆ 13 ವರ್ಷವಾಗಿದ್ದಾಗಿನಿಂದಲೂ ಆತನನ್ನು ಸಾಕಿ ಬೆಳೆಸಿದ್ದಾಳೆ. ಅನಾಥಾಶ್ರಮದಲ್ಲಿ ಸಿಕ್ಕಿದ್ದ ಡೇನಿಯಲ್ನನ್ನು ಮಗನ ರೀತಿಯಲ್ಲಿ ದತ್ತು ಪಡೆದು ಸಾಕಿದ್ದಳು. ತನ್ನ ಮನೆಯಲ್ಲಿಯೇ ಮಿಂಗಲಿಮ್ ಡೇನಿಯಲ್ಗೆ ಸಂಗೀತ ಕಲಿಸುತ್ತಿದ್ದರು ಮತ್ತು ಆ ಸಮಯದಲ್ಲಿ ಅವರು ಕೇವಲ 13 ವರ್ಷ ವಯಸ್ಸಿನವರಾಗಿದ್ದರು ಎಂದು ಹೇಳಲಾಗಿದೆ.
ಆದರೆ, ಮಗನನ್ನೇ ಮದುವೆಯಾದ ಬಳಿಕ ಮಿಂಗಲಿಮ್ಗೆ ಸಾಕಷ್ಟು ಸಮಸ್ಯೆಗಳು ಎದುರಾಗಿವೆ. ರಷ್ಯಾದ ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಮಿಂಗಲಿಮ್ ಇದ್ದ ಮನೆಯನ್ನು ಸೀಜ್ ಮಾಡಿದ್ದು, ಮಿಂಗಲಿಮ್ ಈಗಾಗಲೇ ದತ್ತು ಪಡೆದಿದ್ದ ಐದಕ್ಕೂ ಅಧಿಕ ಮಕ್ಕಳನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಇದರಲ್ಲಿ ನಾಲ್ವರು ಹೆಣ್ಣು ಮಕ್ಕಳಾಗಿದ್ದರೆ, ಇನ್ನೊಂದು ಗಂಡು ಮಗುವಾಗಿದೆ. ಮಿಂಗಲಿಮ್ ತಾನು ಬೆಳೆಸಿದ್ದ ಮಗನನ್ನೇ ಮದುವೆಯಾಗಿರುವ ಕಾರಣ ಅವರ ಉದ್ದೇಶ ಇಲ್ಲಿ ಅರ್ಥವಾಗಿದೆ. ಹಾಗಾಗಿ ಈ ಮಕ್ಕಳನ್ನು ಅವರು ಸರಿಯಾದ ರೀತಿಯಲ್ಲಿ ಬೆಳೆಸುವ ಸಾಧ್ಯತೆ ಕಡಿಮೆ ಎನ್ನುವ ಸಂಶಯ ನಮಗೆ ಬಂದಿದೆ ಎಂದು ತಿಳಿಸಿದ್ದಾರೆ.

