ಉಡುಪಿ:– ಯಡಿಯೂರಪ್ಪ ಸೇರಿ ಅವರ ಪುತ್ರನ ರಿಪೇರಿ ಕೆಲಸ ಬೇರೆಯವರಿಗೆ ವಹಿಸಿದ್ದೇನೆ ಎಂದು ಯತ್ನಾಳ್ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ಅಪ್ಪ ಮಗನನ್ನು ರಿಪೇರಿ ಮಾಡುವ ಕೆಲಸವನ್ನು ಲೋಕಸಭಾ ಚುನಾವಣೆ ಮುಗಿಯುವವರೆಗೆ ಬೇರೆಯವರಿಗೆ ವಹಿಸಿಕೊಟ್ಟಿರುವೆ ಎಂದು ಹೇಳಿದರು.
ಅಧಿಕಾರದಿಂದ ಸಿದ್ದರಾಮಯ್ಯರನ್ನ ಇಳಿಸೋ ಪ್ರಯತ್ನ ಡಿಕೆಶಿ ಮಾಡ್ತಿದ್ದಾರೆ – ಬಿವೈ ವಿಜಯೇಂದ್ರ!
ಸಾಮಾನ್ಯವಾಗಿ ಜಾತಿ ಬಗ್ಗೆ ಮಾತಾಡದ ಕಾಂಗ್ರೆಸ್ ನಾಯಕರು ಮೈಸೂರು-ಕೊಡಗು ಕ್ಷೇತ್ರದ ಅಭ್ಯರ್ಥಿಯ ಜಾತಿಯನ್ನೇ ಮುಖ್ಯ ಅಸ್ತ್ರವಾಗಿ ಬಳಸುತ್ತಿರುವ ಬಗ್ಗೆ ಕೇಳಿದಾಗ ಯತ್ನಾಳ್, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಈಗ ಯಾವುದೇ ನೈತಿಕತೆ ಉಳಿದಿಲ್ಲ, ಮೊದಲಿಂದಲೂ ಹಿಂದೂತ್ವನ್ನು ವಿರೋಧ ಮಾಡಿಕೊಂಡ ಬಂದ ಅವರು ತಮ್ಮ ಕುರ್ಚಿ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ, ಲೋಕಸಭಾ ಚುನಾವಣೆಯಲ್ಲಿ ಚಾಮರಾಜನಗರ ಮತ್ತು ಮೈಸೂರು-ಕೊಡಗು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಉಮೇದುವಾರರು ಸೋತರೆ ಸಿದ್ದರಾಮಯ್ಯ ತಲೆದಂಡ ನಿಶ್ಚಿತ, ಹಾಗಾಗೇ ಅವರು ಹತಾಶರಾಗಿ ತಮ್ಮ ಕೈಹಿಡಿಯಿರಿ ಅಂತ ಮತದಾರರ ಬಳಿ ಅವಲತ್ತುಕೊಳ್ಳುತ್ತಿದ್ದಾರೆ ಎಂದು ಹೇಳಿದರು.