IPL ಸೀಸನ್ 17 ಅರ್ಧ ಪಂದ್ಯಗಳು ಮುಕ್ತಾಯ ಆಗಿದೆ. ಸಧ್ಯಕ್ಕೆ ಐಪಿಎಲ್ನಲ್ಲಿ ಅಬ್ಬರಿಸುತ್ತಿರುವವರು ಆಲ್ಮೋಸ್ಟ್ ಆರ್ಸಿಬಿಯ ಮಾಜಿ ಆಟಗಾರರೇ ಎನ್ನಲಾಗಿದೆ.
IPL 2024: ವಿಶ್ವದಾಖಲೆಯ ಚೇಸಿಂಗ್ ಮಾಡಿದ ಪಂಜಾಬ್ ಕಿಂಗ್ಸ್…!
ಹಲವು ಬಾರಿ ಸೋತರೂ, ಕಪ್ ಗೆಲ್ಲುವುದು ಸಾಧ್ಯವಾಗದೇ ಹೋದರೂ ಆರ್ಸಿಬಿಗೆ ಅಭಿಮಾನಿಗಳ ಪ್ರೀತಿಗೆ ಕೊರತೆ ಇಲ್ಲ. ಆರ್ಸಿಬಿ ಅಭಿಮಾನಿಗಳ ಪ್ರೀತಿ ಲೆಕ್ಕಕ್ಕೇ ಇಲ್ಲ ಎಂಬುದು ಮತ್ತೆ ಮತ್ತೆ ಸಾಮಾಜಿಕ ಮಾಧ್ಯಮಗಳಲ್ಲಿ, ಮೈದಾನದಲ್ಲಿ ಸಾಬೀತಾಗುತ್ತಿದೆ. ತನ್ನದೇ ಆದ ವಿಶಿಷ್ಟ ಮ್ಯಾನರಿಸಂನಿಂದ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿರುವ ಆರ್ಸಿಬಿ ಒಮ್ಮೆಯೂ ಕಪ್ ಗೆಲ್ಲದಿದ್ರೂ ಅಭಿಮಾನಿಗಳ ಕ್ರೇಜ್ ಮಾತ್ರ ಕಡಿಮೆಯಾಗದಿರುವುದು ನಿಜ. ಕಾರಣ, ಆರ್ಸಿಬಿಯಲ್ಲಿ ಆಡದ ದೈತ್ಯ ಕ್ರಿಕೆಟಿಗರೇ ಇಲ್ಲ ಎನ್ನಬಹುದು
ಕ್ರಿಸ್ ಗೇಲ್, ರಾಹುಲ್ ದ್ರಾವಿಡ್, ಯುವರಾಜ್ ಸಿಂಗ್, ಶೇನ್ ವ್ಯಾಟ್ಸನ್ ಹೀಗೆ ದೈತ್ಯ ಕ್ರಿಕೆಟಿಗರು ಆರ್ಸಿಬಿ ತಂಡದಲ್ಲಿದ್ದು ಅಬ್ಬರಿಸಿ ನಂತರ ಇತರ ಟೀಮ್ಗೆ ತೆರಳಿ ರನ್ ಪ್ರವಾಹವನ್ನೇ ಹರಿಸಿದ್ದಾರೆ. ಅದೇ ಇತಿಹಾಸ ಈಗ ಮತ್ತೆ ಮರುಕಳಿಸಿದೆ. ಆರ್ಸಿಬಿ ತಂಡದಲ್ಲಿದ್ದು, ರನ್ ಮಳೆ ಹರಿಸಿ, ವಿಕೆಟ್ ಟೇಕರ್ ಬೌಲರ್ ಆಗಿದ್ದವರು, ಮತ್ತೆ ಫೇಲ್ ಆಗಿದ್ದು, ಇತರ ತಂಡದಲ್ಲಿ ಹೋಗಿ ಚರಿತ್ರೆ ಸೃಷ್ಟಿಸುತ್ತಿರುವವರ ಬಗ್ಗೆಯೇ ಈಗ ದೊಡ್ಡ ಚರ್ಚೆಯಾಗುತ್ತಿದೆ.
ಐಪಿಎಲ್ನಲ್ಲಿ ಅಬ್ಬರಿಸುತ್ತಿರುವ ಆರ್ಸಿಬಿಯ ಮಾಜಿ ಪ್ರಮುಖ ಐವರು ಆಟಗಾರರಲ್ಲಿ ಪ್ರಮುಖರಾಗಿದ್ದಾರೆ ಹೈದರಾಬಾದ್ ತಂಡದಲ್ಲಿ ರನ್ ಸುಂಟರಗಾಳಿ ಎಬ್ಬಿಸಿರುವ ಟ್ರಾವಿಸ್ ಹೆಡ್. ಚೆನ್ನೈ ತಂಡದ ವಿರುದ್ಧ ಅಜೇಯ 124ರನ್ ಸಿಡಿಸಿ ಈ ಬಾರಿಯ ಗರಿಷ್ಟ ರನ್ ಸರದಾರನಾಗಿ ಹೊಮ್ಮಿರುವ ಮಾರ್ಕಸ್ ಸ್ಟೊಯಿನಿಸ್ (ಲಕ್ನೋ ಸೂಪರ್ ಜೈಂಟ್ಸ್). ಚೆನ್ನೈ ತಂಡದಲ್ಲಿ ಬ್ಯಾಕ್ ಟು ಬ್ಯಾಕ್ ಗೆಲುವಿಗೆ ಕಾರಣರಾದ ಯುವ ಆಲ್ರೌಂಡರ್ ಶಿವಂದುಬೆ. ರಾಜಸ್ಥಾನ ತಂಡದ ಗೆಲುವಿನಲ್ಲಿ ಮ್ಯಾಜಿಕ್ ಮಾಡುತ್ತಿರುವ ಯಜುವೇಂದ್ರ ಚಾಹಲ್. ಪಂಜಾಬ್ ತಂಡದಲ್ಲಿ ಬೆಂಕಿಚೆಂಡುವಾಗಿ ಗುರುತಿಸಿಕೊಂಡ ಹರ್ಷಲ್ ಪಟೇಲ್ ಈಗ ಧೂಳೆಬ್ಬಿಸುತ್ತಿದ್ದಾರೆ. ಆರ್ಸಿಬಿಯಲ್ಲಿದ್ದವರು ಇತರೆ ತಂಡದಲ್ಲಿ ಪರಾಕ್ರಮಿಯಾಗಿ ಪವಾಡ ಸೃಷ್ಟಿಸುತ್ತಿದ್ದಾರೆ