ಪುಷ್ಪ 2 ಸಿನಿಮಾದ ಪ್ರೀಮಿಯರ್ ವೇಳೆ ಡಿಸೆಂಬರ್-4 ರಂದು ನಡೆದ ಕಾಲ್ತುಳಿತದ ಪ್ರಕರಣದಲ್ಲಿ ಮಹಿಳೆ ಮೃತಪಟ್ಟಿದ್ದು ಆಕೆಯ ಮಗ ಸಾವು ಬದುಕಿನ ನಡುವೆ ಹೊರಾಡುತ್ತಿದ್ದಾರೆ. ಸಂಧ್ಯಾ ಥಿಯೇಟರ್ನಲ್ಲಿ ಪುಷ್ಪ 2 ವೀಕ್ಷಿಸುತ್ತಿರುವಾಗ ನೂಕುನುಗ್ಗಲು ಉಂಟಾಗಿ ರೇವತಿ ಸಾವಿನ ಬಗ್ಗೆ ಅಲ್ಲು ಅರ್ಜುನ್ಗೆ ತಿಳಿಸಿದ್ದೇವೆ ಎಂದು ಹೈದರಾಬಾದ್ ಪೊಲೀಸರು ಹೇಳಿಕೊಂಡ ನಂತರ ನಟನನ್ನು ವಿಚಾರಣೆಗೆ ಹಾಜರಾಗುವಂತೆ ಕೇಳಲಾಯಿತು. ಅಲ್ಲು ಅರ್ಜುನ್ಗೆ ಹಲವಾರು ಪ್ರಶ್ನೆಗಳನ್ನು ಕೇಳಲಾಗಿದೆ ಎಂದು ವರದಿಗಳು ಹೇಳಿವೆ. ವಿಚಾರಣೆ ವೇಳೆ ಅಲ್ಲು ಅರ್ಜುನ್ ಭಾವುಕರಾದರು ಎನ್ನಲಾಗಿದೆ.
“ಅಲ್ಲು ಅರ್ಜುನ್ ಅವರನ್ನು ಸುಮಾರು ಮೂರು ಗಂಟೆಗಳ ಕಾಲ ಪ್ರಶ್ನಿಸಲಾಯಿತು. ಮತ್ತು ಸಂಧ್ಯಾ ಥಿಯೇಟರ್ನಲ್ಲಿ ನಡೆದ ಪುಷ್ಪ 2 ವಿಶೇಷ ಪ್ರದರ್ಶನದಲ್ಲಿ ಸಂಭವಿಸಿದ ಕಾಲ್ತುಳಿತದ ವೀಡಿಯೊಗಳನ್ನು ತೋರಿಸಲಾಗಿದ್ದು ಈ ವೇಳೆ ಅಲ್ಲು ಅರ್ಜುನ್ ಭಾವುಕರಾಗಿದ್ದಾರೆ ಎನ್ನಲಾಗಿದೆ.
ವಿಡಿಯೋ ನೋಡುವಾಗ ಅಲ್ಲು ಅರ್ಜುನ್, ಶ್ರೀತೇಜ್ ಮತ್ತು ರೇವತಿ ಗಾಯಗೊಂಡಿರುವ ದೃಶ್ಯಗಳನ್ನು ನೋಡಿ ಭಾವುಕರಾದರು. ಮಂಗಳವಾರ ನಡೆದ ವಿಚಾರಣೆಯ ಬಗ್ಗೆ ಅಲ್ಲು ಅರ್ಜುನ್ ಇನ್ನೂ ಬಹಿರಂಗ ಹೇಳಿಕೆ ನೀಡಿಲ್ಲ.
ಡಿಸೆಂಬರ್ 13 ರಂದು ಅಲ್ಲು ಅರ್ಜುನ್ ಅವರನ್ನು ಅವರ ನಿವಾಸದಿಂದ ಪೊಲೀಸರು ಬಂಧಿಸಿದ್ದರು. ಆರೋಪಿ ಸಂಖ್ಯೆ 11. ನಂತರ ತೆಲಂಗಾಣ ಹೈಕೋರ್ಟ್ ನಾಲ್ಕು ವಾರಗಳ ಮಧ್ಯಂತರ ಜಾಮೀನು ನೀಡಿತು. ಡಿಸೆಂಬರ್ 14 ರಂದು ಅವರು ಜೈಲಿನಿಂದ ಬಿಡುಗಡೆಯಾಗಿದ್ದರು.
ಡಿಸೆಂಬರ್ 22ರಂದು ಪುಷ್ಪಾ ನಟನ ಮನೆ ಮೇಲೆ ಗುಂಪೊಂದು ದಾಳಿ ನಡೆಸಿತ್ತು. ರೇವತಿ ಎಂದು ಗುರುತಿಸಲಾದ ಮೃತ ಮಹಿಳೆಯ ಕುಟುಂಬಕ್ಕೆ ನ್ಯಾಯ ಒದಗಿಸಬೇಕೆಂದು ಅವರು ಒತ್ತಾಯಿಸಿದರು.