ಬಾಲಿವುಡ್ ಸೂಪರ್ ಸ್ಟಾರ್ ಆಮಿರ್ ಖಾನ್ ನಟನೆಯ 2008ರಲ್ಲಿ ತೆರೆಕಂಡ ಗಜನಿ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ 100 ಕೋಟಿ ಕಲೆಕ್ಷನ್ ಮಾಡಿತ್ತು. ಎ.ಆರ್. ಮುರುಗದಾಸ್ ನಿರ್ದೇಶನದ ಗಜನಿ ಸೀಕ್ವೆಲ್ ಬರಲಿದೆ ಎಂದು ಹೇಳಲಾಗಿತ್ತು. ಇದೀಗ ಗಜನಿ ಸೀಕ್ವೆಲ್ ಗಾಗಿ ಕಾದು ಕೂತ ಸಿನಿ ಅಭೀಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ. ಅಲ್ಲು ಅರ್ಜುನ್ ಅವರ ತಂದೆ ಅಲ್ಲು ಅರವಿಂದ್ ‘ಗಜಿನಿ 2’ ಸಿನಿಮಾ ಮಾಡಲು ಆಸಕ್ತಿ ತೋರಿಸಿದ್ದಾರೆ ಎನ್ನಲಾಗುತ್ತಿದೆ.
ಟಾಲಿವುಡ್ನಲ್ಲಿ ‘ತಂಡೇಲ್’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಸಿನಿಮಾದ ಹಿಂದಿ ವರ್ಷನ್ ಟ್ರೇಲರ್ ಅನ್ನು ಮುಂಬೈನಲ್ಲಿ ಬಿಡುಗಡೆ ಮಾಡಲಾಗಿದೆ. ಈ ಕಾರ್ಯಕ್ರಮಕ್ಕೆ ಆಮಿರ್ ಖಾನ್ ಅವರು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಅಲ್ಲು ಅರವಿಂದ್ ಕೂಡ ವೇದಿಕೆಯಲ್ಲಿ ಇದ್ದರು. ಈ ವೇಳೆ ಅಲ್ಲು ಅರವಿಂದ್ ಗಜನಿ ಸೀಕ್ವೆಲ್ ಮಾಡುವ ಮಾತನಾಡಿದ್ದಾರೆ.
‘ಅಂದಿನ ನೂರು ಕೋಟಿ ರೂಪಾಯಿ ಇಂದಿನ 1000 ಕೋಟಿ ರೂಪಾಯಿಗೆ ಸಮ. ನಾನು ಆಮಿರ್ ಖಾನ್ ಜೊತೆ 1000 ಕೋಟಿ ರೂಪಾಯಿಯ ಸಿನಿಮಾ ಮಾಡಬೇಕು. ಅದು ಗಜನಿ 2 ಆಗಿರಬಹುದು’ ಎಂದು ಅಲ್ಲು ಅರವಿಂದ್ ಹೇಳಿದರು. ‘ಖಂಡಿತವಾಗಿಯೂ ಸರ್. ಜನರು ಈಗಾಗಲೇ ಇಂಟರ್ನೆಟ್ನಲ್ಲಿ ಗಜಿನಿ 2 ಬಗ್ಗೆ ಮಾತನಾಡಲು ಆರಂಭಿಸಿದ್ದಾರೆ’ ಎಂದು ಆಮಿರ್ ಖಾನ್ ಹೇಳಿದರು.
ವೇದಿಕೆಯಲ್ಲೇ ಇವರಿಬ್ಬರು ‘ಗಜಿನಿ 2’ ಸಿನಿಮಾದ ಬಗ್ಗೆ ಮಾತನಾಡಿದ್ದರಿಂದ ಅಭಿಮಾನಿಗಳಿಗೆ
ಸಖತ್ ಥ್ರಿಲ್ ಆಗಿದ್ದಾರೆ. ಇತ್ತೀಚೆಗೆ ಆಮಿರ್ ಖಾನ್ ನಟನೆಯ ಸಿನಿಮಾಗಳು ಹೇಳುವ ಮಟ್ಟಿಗೆ ಸಕ್ಸಸ್ ಆಗುತ್ತಿಲ್ಲ. ಹಾಗಾಗಿ ಅವರಿಗೆ ಕೂಡ ಒಂದು ಬ್ರೇಕ್ ಬೇಕಿದೆ. ಹೀಗಾಗಿ ಗಜನಿ 2 ಆಮೀರ್ ಖಾನ್ ಗೆ ಬ್ರೇಕ್ ನೀಡುತ್ತಾ ಕಾದು ನೋಡಬೇಕಿದೆ.