ಹುಬ್ಬಳ್ಳಿ: ರಾಜ್ಯದ ಮೂರು ವಿಧಾನ ಸಭೆಯ ಉಪ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಹಾಗೂ ಜೆಡಿಎಸ್ ಮೈತ್ರಿ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಾರೆ ಎಂದು
ಶಾಸಕ ಮಹೇಶ್ ಟೆಂಗಿನಕಾಯಿ ವಿಶ್ವಾಸ ವ್ಯಕ್ತಪಡಿಸಿದರು.
ಸಲ್ಮಾನ್ ಖಾನ್ ಗೆ ಜೀವ ಬೆದರಿಕೆ ಹಾಕಿ 5 ಕೋಟಿ ರೂಗೆ ಬೇಡಿಕೆ: ಕ್ಷಮೆ ಕೇಳಿದ ವ್ಯಕ್ತಿ
ನಗರದಲ್ಲಿಂದು ಸುದ್ದಿಗಾರರ ಅವರು ಮಾತನಾಡಿದರು,ರಾಜ್ಯದ ಮೂರು ವಿಧಾನ ಸಭೆಯ ಉಪ ಚುನಾವಣೆ ಹಿನ್ನೆಲೆಯಲ್ಲಿ ಏನೆಲ್ಲಾ ತಯಾರಿ ಮಾಡಿಕೊಳ್ಳಲಾಗಿದೆ ಎಂಬ ಕುರಿತು ಮಾಹಿತಿ ನೀಡಿದ ಅವರು, ರಾಜ್ಯದ ಮೂರು ಉಪ ಚುನಾವಣೆಯಲ್ಲಿ ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿ ಘೋಷಣೆ ಮಾಡಲಾಗಿದ್ದು ಹಾವೇರಿ ಜಿಲ್ಲೆಯ ಶಿಗ್ಗಾಂವಿ ವಿಧಾನ ಸಭಾ ಕ್ಷೇತ್ರಕ್ಕೆ ಭರತ್ ಬೊಮ್ಮಾಯಿ ಹಾಗೂ ಬಳ್ಳಾರಿ ಜಿಲ್ಲೆಯ ಸಂಡೂರಿಗೆ ಬಂಗಾರು ಹಣಮಂತ ಅವರನ್ನ ಅಭ್ಯರ್ಥಿಯನ್ನಾಗಿ ಮಾಡಲಾಗಿದೆ.
ಇನ್ನು ರಾಮನಗರ ಜಿಲ್ಲೆಯಚನ್ನಪಟ್ಟಣ ವಿಧಾನ ಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಎನ್ ಡಿಎ ಮೈತ್ರಿ ಅಭ್ಯರ್ಥಿ ಹಾಕಬೇಕು ಅಂತಾ ಇದೆಇದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ನಿಲುವು ಆಗಿದ್ದು ಇನ್ನೇನು ಶೀಘ್ರವೇ ಯಾರು ಅಭ್ಯರ್ಥಿ ಅಂತಾ ಅಂತಿಮ ಆಗುತ್ತದೆಮೂರು ವಿಧಾನ ಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಗೆಲ್ಲುತ್ತಾರೆ ಯಾವುದೇ ಅನುಮಾನ ಬೇಡ.ಈಗಾಗಲೇ ಎಲ್ಲ ರೀತಿಯ ತಯಾರು ಮಾಡಲಾಗಿದ್ದು
ಮೂರು ಕ್ಷೇತ್ರಗಳಲ್ಲಿ ಗೆಲುವಿಗೆ ತಂತ್ರ ಎಣಿಯಲಾಗುತ್ತಿದೆ.ಬಳ್ಳಾರಿ ಜಿಲ್ಲೆಯ ಸಂಡೂರು ವಿಧಾನ ಸಭಾ ಕ್ಷೇತ್ರ ಹಾಗೂ ಹಾವೇರಿ ಜಿಲ್ಲೆಯ ಶಿಗ್ಗಾಂವಿ ವಿಧಾನ ಸಭಾ ಕ್ಷೇತ್ರಗಳಲ್ಲಿ ಸಭೆಗಳ ಮೇಲೆ ಸಭೆ ಮಾಡಲಾಗುತ್ತಿದೆ
ಇನ್ನೇನು ಚನ್ನಪಟ್ಟಣ ಅಭ್ಯರ್ಥಿ ಅಂತಿಮ ಆದ ತಕ್ಷಣ ಅಲ್ಲಿಯೂ ಸಹ ಸಭೆ ನಡೆಸಲಾಗುವುದು
ಇನ್ನೇನು ಚನ್ನಪಟ್ಟಣ ಅಭ್ಯರ್ಥಿ ಅಂತಿಮ ಆದ ತಕ್ಷಣ ಅಲ್ಲಿಯೂ ಸಹ ಸಭೆ ನಡೆಸಲಾಗುವುದು ಎಂದರು.
*ಸಂಡೂರಿನಲ್ಲಿ ಕೆ.ಎಸ್. ಶಿಗ್ಗಾಂವಿಯಲ್ಲಿ ಶ್ರೀಕಾಂತ್ ದುಂಡಿಗೌಡರ ಬಂಡಾಯ ವಿಚಾರ*
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದು ಸಹಜ ಆಗಿದ್ದುಅನೇಕರು ಟಿಕೆಟ್ ಕೇಳುತ್ತಾರೆ ಕೇಳುವುದರಲ್ಲಿ ತಪ್ಪು ಇಲ್ಲ
ನಮ್ಮ ಪಕ್ಷ ಪ್ರಜಾಪ್ರಭುತ್ವ ವ್ಯವಸ್ಥೆಯ ಹಿನ್ನೆಲೆ ಪಕ್ಷ ಆಗಿದ್ದರಿಂದ ಟಿಕೆಟ್ ಕೇಳಿದ್ದು ಎಲ್ಲರಿಗೂ ಆದ್ಯತೆ ಕೊಡುತ್ತದೆ.
ಒಂದು ಸಲ ಪಕ್ಷ ಅಧಿಕೃತ ಅಭ್ಯರ್ಥಿ ಘೋಷಣೆ ಮಾಡಿದ ಬಳಿಕ ಎಲ್ಲರೂ ಒಕ್ಕಟ್ಟಾಗಿ ಕೆಲಸ ಮಾಡಬೇಕು
ಎಲ್ಲರೂ ಸೇರಿಸಿ ಕಾರ್ಯಕರ್ತರು ಅಂತಿಮವಾದ ಅಭ್ಯರ್ಥಿ ಗೆಲುವಿಗೆ ಶ್ರಮವಹಿಸಲಾಗುವುದು ಎಂದರು.ಇನ್ನು ಇದೇ ಸಮಯದಲ್ಲಿ ಚನ್ನಪಟ್ಟಣ ವಿಧಾನ ಸಭಾ ಕ್ಷೇತ್ರದಲ್ಲಿ ಯೋಗೇಶ್ವರ ಟಿಕೆಟ್ ಕೊಡುವ ವಿಚಾರವಾಗಿ ಅವರು ಮಾತನಾಡಿದ್ದು,
ಇನ್ನೂ ಚನ್ನಪಟ್ಟಣದಲ್ಲಿ ಯಾವುದೇ ಅಭ್ಯರ್ಥಿ ಪೈನಲ್ ಆಗಿಲ್ಲ
ನಮ್ಮ ನಾಯಕರು ಅದಕ್ಕೆ ಸರಿದೂಗಿಸುವ ಕೆಲಸ ಮಾಡುತ್ತಾರೆ
ಇನ್ನು ಅಲ್ಲಿ ಘೋಷಣೆ ಮಾಡಿಲ್ಲ. ಈಗಾಗಲೇಸಿ.ಪಿ ಯೋಗೇಶ್ವರ ಅವರ ಜೊತೆಗೆ ಮಾತನಾಡಿ ಸರಿ ಮಾಡಲಾಗುವುದುನಮ್ಮ ಭಾರತೀಯ ಜನತಾ ಪಕ್ಷದ ಅಧ್ಯಕ್ಷರು ಇದಕ್ಕೆ ಅಂತಿಮವಾಗಿ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದರು.
*ಹಳೆ ಹುಬ್ಬಳ್ಳಿಯ ಗಲಾಟೆ ಪ್ರಕರಣ ಕುರಿತು ಹಿಂದುಪರ ಸಂಘಟನೆಗಳ ಹೋರಾಟ ವಿಚಾರ*
ಹಳೆ ಹುಬ್ಬಳ್ಳಿಯ ಗಲಾಟೆ ಪ್ರಕರಣ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯತ್ತೇವೆ.
ಅಕ್ಟೋಬರ್ 25 ಕ್ಕೆ ಚುನಾವಣಾ ನಾಮಪತ್ರ ಸಲ್ಲಿಕೆ ಕೊನೆಯ ದಿನ ಆಗಿದ್ದು ಆದ್ದರಿಂದ ನಾವು ಅಂದು ಹೋರಾಟ ಮಾಡಬೇಕಾ ಬೇಡಾ ಅಂತಾ ತೀರ್ಮಾನ ಆಗಿಲ್ಲ ಆದರೆ
ನಾಳೆ ಹಿಂದು ಪರ ಸಂಘಟನೆಗಳಿಂದ ಹೋರಾಟ ನಡೆಸಲು ತಯಾರಿ ಮಾಡಿದ್ದಾರೆಎರಡು ದಿನಗಳ ಹಿಂದೆ ಸಹ ಸದ್ಭಾವಾನಾ ದಿನ ಕಾರ್ಯಕ್ರಮದಲ್ಲಿ ಗಂಭೀರ ಚರ್ಚೆ ಆಗಿದೆಮುಖ್ಯಮಂತ್ರಿಗಳು ಇದನ್ನು ಗಂಭೀರ ಆಗಿ ತೆಗೆದುಕೊಳ್ಳಬೇಕು ಎಂದು ಒತ್ತಾಯ ಮಾಡಿದರು.