ಬಿಜೆಪಿಯ ಬಂಡಾಯದ ಬೇಗುದಿ ಬೀದಿ ಜಗಳವಾಗಿ ಮನೆಯೊಂದು ಮೂರುಬಾಗಿಲಾಗಿದೆ, ರಾಜ್ಯಾಧ್ಯಕ್ಷ ವಿಜಯೇಂದ್ರ ರೆಬಲ್ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಟೀಂ ನಡುವಿನ ಟಾಕ್ ವಾರ್ ದಿನದಿಂದ ದಿನಕ್ಕೆ ಜೋರಾಗ್ತಿದೆ. ಇದರ ಬೆನ್ನಲ್ಲೇ ಯಡಿಯೂರಪ್ಪ ವಿರುದ್ದದ ಭ್ರಷ್ಟಾಚಾರ ಆರೋಪ ಪ್ರಕರಣದ ತನಿಖೆಗೆ ಪೂರ್ವಾನುಮತಿ ನೀಡಬೇಕು ಎಂದು ರಾಜ್ಯಪಾಲರಿಗೆ ಶಿಫಾರಸು ಮಾಡಲು ಸಿದ್ದರಾಮಯ್ಯ ಸಂಪುಟ ತೀರ್ಮಾನಿಸಿದೆ.
2020 ನವೆಂಬರ್ 19 ರಂದು ಟಿಜೆ ಅಬ್ರಹಾಂ ಎಸಿಬಿಗೆ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅಡಿ ಯಡಿಯೂರಪ್ಪ- ವಿಜಯೇಂದ್ರ ವಿರುದ್ದ ದೂರು ನೀಡಿದ್ದರು. ಬಿಡಿಎ ಫ್ಲಾಟ್ ಕಟ್ಟುವ ವಿಚಾರಕ್ಕೆ ರಾಮಲಿಂಗಂ ಕಂಪನಿಯಿಂದ ಕಿಕ್ಬ್ಯಾಕ್ ಪಡೆದಿದ್ದಾರೆ ಅಂತ ಆರೋಪಿಸಿದ್ದರು.
ಅಂಚೆ ಕಚೇರಿಯಲ್ಲಿ “ಪ್ರೀಮಿಯಂ ಉಳಿತಾಯ ಖಾತೆ” ತೆರೆಯುವುದು ಹೇಗೆ.? ಪ್ರಯೋಜನಗಳೇನು.? ಇಲ್ಲಿದೆ ಮಾಹಿತಿ
ತನಿಖೆ – ವಿಚಾರಣೆ ನಡೆಸಲು ಅನುಮತಿ ಕೋರಿ ರಾಜ್ಯಪಾಲರಿಗೆ ಮನವಿ ಮಾಡಿದ್ದರು. ಆದರೆ ರಾಜ್ಯಪಾಲರು ಅನುಮತಿಯನ್ನು ನಿರಾಕರಿಸಿದ್ದರು. ಈ ವಿಷಯ ಇಂದು ಕ್ಯಾಬಿನೆಟ್ ಮುಂದೆ ಪ್ರಸ್ತಾಪ ಆಗಿದ್ದು, ರಾಜ್ಯಪಾಲರ ನಿರ್ಣಯ ಪುನಃ ಪರಿಶೀಲನೆಗೆ ರಾಜ್ಯ ಸರ್ಕಾರ ತೀರ್ಮಾನ ಮಾಡಲಾಗಿದೆ.
ಈ ಮಧ್ಯೆ ಪೋಕ್ಸೋ ಪ್ರಕರಣದಲ್ಲಿ ಬಿಎಸ್ವೈಗೆ ಮಧ್ಯಂತರ ರಕ್ಷಣೆ ತೆರವಿಗೆ ಹೈಕೋರ್ಟ್ ಒಪ್ಪಿಲ್ಲ. ಮಧ್ಯಂತರ ರಕ್ಷಣೆ ತೆರವು ಮಾಡಬೇಕು ಎಂದು ವಿಶೇಷ ಸರ್ಕಾರಿ ಅಭಿಯೋಜಕ ಪ್ರೊಫೆಸರ್ ರವಿ ವರ್ಮಕುಮಾರ್ ವಾದ ಮಾಡಿದ್ದಾರೆ. ಇದಕ್ಕೆ ಪ್ರತಿವಾದ ಮಾಡಲು ಯಡಿಯೂರಪ್ಪ ಪರ ಹಿರಿಯ ವಕೀಲ ಸಿವಿ ನಾಗೇಶ್ ಕಾಲಾವಕಾಶ ಕೇಳಿದ್ದರಿಂದ ಡಿಸೆಂಬರ್ 2ರ ಮಧ್ಯಾಹ್ನ 2.30ಕ್ಕೆ ಪ್ರಕರಣದ ವಿಚಾರಣೆ ಮುಂದೂಡಿಕೆಯಾಗಿದೆ.