ಬೆಂಗಳೂರು: ಸಿಲಿಕಾನ್ ಸಿಟಿಯ (Bengaluru) ಪ್ರತಿಷ್ಠಿತ ಮಾಲ್ಗಳಲ್ಲಿ ಒಂದಾದ ಮಾಲ್ ಆಫ್ ಏಷ್ಯಾ ಗೆ ಸರತಿ ಸಾಲಿನಲ್ಲಿ ನೋಟೀಸ್ ಜಾರಿಯಾಗಿದ್ದು ಬಿಬಿಎಂಪಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಕಮರ್ಷಿಯಲ್ ಟ್ಯಾಕ್ಸ್ ಇಲಾಖೆಯಿಂದ ನಿಯಮಗಳ ಉಲ್ಲಂಘನೆ ಆರೋಪದ ಮೇಲೆ ನೊಟೀಸ್ ಜಾರಿಯಾಗಿದೆ.
ಈಗಾಗಲೇ ಮಾಲ್ ಆಫ್ ಏಷ್ಯಾ ಬಳಿ ಸೆಕ್ಷನ್ 144 (Section 144) ಜಾರಿಗೊಳಿಸಲಾಗಿದೆ. ಮಾಲ್ ಆಫ್ ಏಷ್ಯಾ ಮೇಲೆ ಕರವೇ (Karnataka Rakshana Vedike) ಕಾರ್ಯಕರ್ತರ ಮುತ್ತಿಗೆ ಹಿನ್ನೆಲೆ ಭಾನುವಾರದಿಂದ 15 ದಿನಗಳವರೆಗೆ ಮಾಲ್ ಅನ್ನು ಮುಚ್ಚಲಾಗಿದೆ ಈಗ ಮತ್ತೆ ನೋಟಿಸ್ ಕೂಡ ಜಾರಿಯಾಗಿದೆ.
K – SET Exam: ಜನವರಿ 13ರಂದು ಕೆ-ಸೆಟ್ ಪರೀಕ್ಷೆ: ಪ್ರವೇಶಪತ್ರ ಪಡೆದುಕೊಳ್ಳಲು ಡೌನ್ಲೋಡ್ಗೆ ಸೂಚನೆ
ಹೆದ್ದಾರಿ ನಿಯಮಗಳನ್ನ ಗಾಳಿಗೆ ತೂರಿ ಕನ್ಸಟ್ರಕ್ಷನ್ ಮಾಡಿರೋ ಮಾಲ್ಆಫ್ ಏಷ್ಯಾ ಹಾಗೆ ಬಿಬಿಎಂಪಿ ಸ್ಕೆಚ್ ನ್ನ ಬದಲಾಯಿಸಿ ಕಾಮಗಾರಿ, ಪಾರ್ಕಿಂಗ್ ಏರಿಯಾ ಅಂತ ಪ್ಲಾನ್ ನಲ್ಲಿ ತೋರಿಸಿದ್ದ ಮಾಲ್ ಬಳಿಕ ಪಾರ್ಕಿಂಗ್ ಏರಿಯಾನ ಪಾರ್ಟಿ ಏರಿಯಾ ಅಂತ ಮಾರ್ಪಾಡು
ಮತ್ತೊಂದೆಡೆ ಪಲೂಷನ್ ಕಂಟ್ರೋಲ್ ಬೋರ್ಡ್ ನಿಂದಲೂ ನೋಟೀಸ್ ಜಾರಿಯಾಗಿದ್ದು 90. ಡೆಸಿಬಲ್ ಸೌಂಡ್ ಹೊರ ಬರ್ತಿರೋ ಹಿನ್ನೆಲೆ ನೊಟೀಸ್ ಅಕ್ಕ ಪಕ್ಕದ ಅಪಾರ್ಟ್ಮೆಂಟ್ ನಿವಾಸಿಗಳದೂರು ಹಿನ್ನೆಲೆ ನೊಟೀಸ್ ಜಾರಿಯಾಗಿದ್ದು ಶಬ್ದ ಮಾಲೀನ್ಯ ಮಾಪನ ಮಾಡಿದ ವೇಳೆ ನಿಯಮಗಳ ಉಲ್ಲಂಘನೆ ಬೆಳಕಿಗೆ
ಈ ಹಿನ್ನೆಲೆ ಸದ್ಯ ಬಿಬಿಎಂಪಿ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಹೆದ್ದಾರಿ ಪ್ರಾಧಿಕಾರದಿಂದ ಬೆಂಗಳೂರಿನ (Bengaluru) ಪ್ರತಿಷ್ಠಿತ ಮಾಲ್ಗಳಲ್ಲಿ ಒಂದಾದ ಮಾಲ್ ಆಫ್ ಏಷ್ಯಾ ಗೆ ನೊಟೀಸ್ ಜಾಋಇಯಾಗಿದೆ.